ಹಾವೇರಿ: ‘ಬೇರೆ ಪಕ್ಷದಿಂದ 15-20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಅವರನ್ನು ಬಿಜೆಪಿಗೆತೆಗೆದುಕೊಳ್ಳಬೇಕೋ ಬೇಡವೋ ಎಂಬುದನ್ನು ನಮ್ಮ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಗೆ ವರ್ಚಸ್ಸು ಇರುವುದಕ್ಕೆ ಬೇರೆ ಪಕ್ಷದಿಂದ ಬರಲು ಶಾಸಕರು ಸಿದ್ಧವಿದ್ದಾರೆ. ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇಲ್ಲ. ನಮ್ಮವರು ಪಕ್ಷ ನಿಷ್ಠೆಯನ್ನು ಹೊಂದಿದ್ದಾರೆ ಎಂದು ಭಿನ್ನಮತದ ಬಗ್ಗೆ ಸಮಜಾಯಿಷಿ ನೀಡಿದರು.
ಶಾಸಕರ ರಹಸ್ಯ ಸಭೆ ಬಗ್ಗೆ ಈಗಾಗಲೇ ಉಮೇಶ ಕತ್ತಿ ಸ್ಪಷ್ಟನೆ ನೀಡಿದ್ದಾರೆ.ಉತ್ತರ ಕರ್ನಾಟಕದ ಅನೇಕ ಶಾಸಕರು ಊಟಕ್ಕಾಗಿ ಒಂದೆಡೆ ಸೇರಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲ ಶಾಸಕರು ಸಿ.ಎಂ.ಯಡಿಯೂರಪ್ಪ ನಾಯಕತ್ವದಲ್ಲಿ ಒಟ್ಟಾಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.