ಹಾನಗಲ್: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಎಬಿವಿಪಿ ವತಿಯಿಂದ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ತಮ್ಮಣ್ಣ ಕಾಂಬ್ಳಿ
ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿಯು ಆರಂಭದಿಂದಲೇ ಬ್ರಿಟಿಷ್ ವಸಾಹತುಶಾಹಿಯ ಮುಂದುವರೆದ ಭಾಗವಾಗಿದೆ. ಈ ಕಾರಣಕ್ಕಾಗಿ ಕೇಂದ್ರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಹಂತದಲ್ಲಿಯೇ ರಾಜ್ಯ ಸರ್ಕಾರ ಇದನ್ನು ರದ್ದುಗೊಳಿಸಲು ಮುಂದಾಗಿರುವುದು ರಾಜಕೀಯ ಪ್ರೇರಿತ, ಪೂರ್ವಾಗ್ರಹ ಪೀಡಿತ, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾಗಿದೆ ಎಂದು ಆರೋಪಿಸಿದರು.
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಶಿಸ್ತಿನ ಅಧ್ಯಯನಕ್ಕೆ, ಕೌಶಲ ಆಧಾರಿತ ಶಿಕ್ಷಣಕ್ಕೆ ಮತ್ತು ಭಾರತದ ಬಹುಭಾಷಿತ, ಸಾಂಸ್ಕೃತಿಕ ಬಹುತ್ವಕ್ಕೆ ಪ್ರಾಂತೀಯ, ಸ್ಥಳೀಯ ಭಾಷೆಗಳ ಅಭಿವೃದ್ದಿಗೆ ಸೂಕ್ತ ಮಾನ್ಯತೆ ನೀಡಿ ರೂಪಿತವಾಗಿದೆ ಎಂದು ತಿಳಿಸಿದ್ದಾರೆ.
ಎಬಿವಿಪಿ ತಾಲ್ಲೂಕು ಸಂಚಾಲಕ ಪ್ರಸಾದ ಶೀಮಂಡನವರ, ಸಹ ಸಂಚಾಲಕ ರಾಘವೇಂದ್ರ ಜಾಧವ, ಮುಖಂಡರಾದ ಶಶಾಂಕ, ಶಿವಕುಮಾರ, ಅಮೃತ, ಚಂದ್ರಶೇಖರ, ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.