ADVERTISEMENT

ರಾಣೆಬೆನ್ನೂರು: ವೈಕುಂಠ ಏಕಾದಶಿ ನಾಳೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 14:42 IST
Last Updated 22 ಡಿಸೆಂಬರ್ 2023, 14:42 IST

ರಾಣೆಬೆನ್ನೂರು: ಸ್ಥಳೀಯ ಮೆಡ್ಲೇರಿ ರಸ್ತೆಯ ವಾಗೀಶ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿ.23ರಂದು ವೈಕುಂಠ ಏಕಾದಶಿ ಹಾಗೂ ವೈವಿದ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಲಿವೆ.

ಬೆಳಿಗ್ಗೆ 5ರಿಂದ 6.30ರ ವರೆಗೆ ಮಹಾಭಿಷೇಕ, ಅಲಂಕಾರ, ನೈವೇದ್ಯ, 6.30ರಿಂದ 7ರ ವರೆಗೆ ವೇದಮಂತ್ರ ಮಂಗಲವಾದ್ಯಗಳೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಗೂ ವೈಕುಂಠ ಮಂಟಪದಲ್ಲಿ ಭೂ ಸಹಿತ ಶ್ರೀನಿವಾಸನ ಪ್ರತಿಷ್ಟಾಪನೆ. ಸಂಜೆ 5ರಿಂದ ರಾತ್ರಿ 8ರ ವರೆಗೆ ನಾದ ಸ್ವರ ನಡೆಯಲಿದೆ. ನಂತರ ಭಜನಾ ಮಂಡಳಿಗಳಿಂದ ಸಂಗೀತ ಸೇವೆ, ಆನಂತರ ರಾತ್ರಿ 9ಕ್ಕೆ ವಿಷ್ಣು ಸಹಸ್ರನಾಮ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ವೆಂಕಟೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆಗೆ ತಿಳಿಸಿದೆ.


ಚೌಡೇಶ್ವರಿದೇವಿ ಕಾರ್ತಿಕೋತ್ಸವ ಡಿ.26ಕ್ಕೆ:

ADVERTISEMENT

ರಾಣೆಬೆನ್ನೂರು: ಇಲ್ಲಿನ ಗ್ರಾಮದೇವತೆ ಮೇಡ್ಲೇರಿ ರಸ್ತೆಯ ಗಂಗಾಜಲ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವವು ಡಿ.26ರಂದು ಸಂಜೆ 7 ಗಂಟೆಗೆ ಜರುಗಲಿದೆ. ಅಂದು ಮಧ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ. ಕಾರ್ತಿಕೋತ್ಸವ ಹಚ್ಚುವ ಮುನ್ನ ದೇವಿಗೆ ಪುಷ್ಪಾಲಂಕಾರ, ಅಭಿಷೇಕ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.