ADVERTISEMENT

ಶಿಗ್ಗಾವಿ | ನಾಗನೂರ ಕೆರೆಗೆ ಬಂತು ವರದಾ ನದಿ ನೀರು

ತಪ್ಪಿದ ಕುಡಿಯುವ ನೀರಿನ ಬವಣೆ

ಎಂ.ವಿ.ಗಡಾದ
Published 24 ಜುಲೈ 2024, 5:11 IST
Last Updated 24 ಜುಲೈ 2024, 5:11 IST
ಶಿಗ್ಗಾವಿ ಪಟ್ಟಣದ ನಾಗನೂರ ಕೆರೆಗೆ ವರದಾ ನದಿಯಿಂದ ನೀರು ಬರುತ್ತಿರುವುದು.
ಶಿಗ್ಗಾವಿ ಪಟ್ಟಣದ ನಾಗನೂರ ಕೆರೆಗೆ ವರದಾ ನದಿಯಿಂದ ನೀರು ಬರುತ್ತಿರುವುದು.   

ಶಿಗ್ಗಾವಿ: ಪಟ್ಟಣದ ಐತಿಹಾಸಿಕ ನಾಗನೂರ ಕೆರೆಗೆ ಸುಮಾರು 15 ಕಿ.ಮೀಯಿಂದ ದೂರದಲ್ಲಿರುವ ವರದಾ ನದಿಯಿಂದ ನೀರು ಬರುತ್ತಿರುವುದು ಪಟ್ಟಣದ ಜನತೆಗೆ ಜೀವಕಳೆ ತುಂಬಿದಂತಾಗಿದೆ.

ಕಳೆದ ಮೂರು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ವರದಾ ನದಿ ತುಂಬಿ ಹರಿಯುತ್ತಿದ್ದು, ಹೀಗಾಗಿ ನಾಗನೂರ ಕೆರೆಗೆ ನೀರು ಹರಿಸಲು ಆರಂಭವಾಗಿದೆ. ಕಳೆದ ಬೇಸಿಗೆಯಲ್ಲಿ ನೀರು ಭತ್ತಿ ನೀರು ಕಲುಷಿತವಾಗಿ ಹಸಿರು ಬಣ್ಣ ಹೊಂದಿತ್ತು. ಅದೇ ನೀರನ್ನು ಸರಬುರಾಜು ಮಾಡಿದಾಗ ಪಟ್ಟಣದ ಜನತೆ ವಿರೋಧಿಸುವ ಮೂಲಕ ಕುಡಿಯುಲು ನೀರು ಬಳಕೆ ಮಾಡದಂತಾಗಿತ್ತು.

ಜನ, ಜಾನುವಾರುಗಳು ಕೆರೆ ನೀರಿಗಾಗಿ ಪರದಾಡುವಂತಾಗಿತು. ಆದರೆ ಮಳೆ ಸತತವಾಗಿ ಬಿಳುತ್ತಿರುವ ಹಿನ್ನೆಲೆಯಲ್ಲಿ ನಾಗನೂರ ಕೆರೆಗೆ ನೀರು ಬರುತ್ತಿರುವುದನ್ನು ಜನ ಕಂಡು ಅಣ್ಣಾರ ನಮ್ಮೂರ ಕೆರೆಗೆ ನೀರು ಹರಿದು ಬರುತ್ತಿದೆ ಎಂದು ಹರ್ಷೋದ್ಘಾರದಿಂದ ಹೇಳುತ್ತಿರುವುದು ಕೇಳಿ ಬರುತ್ತಿದೆ.

ADVERTISEMENT

ಶಿಗ್ಗಾವಿ, ಸವಣೂರ ಏತ್ ನೀರಾವರಿ ಯೋಜನೆಯಡಿ ಗದಗ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ಹಿಂದೆ ಕ್ಷೇತ್ರದ ಶಾಸಕರಾದ ಅವಧಿಯಲ್ಲಿ ಶಿಗ್ಗಾವಿ, ಸವಣೂರ, ಬಂಕಾಪುರ ಪಟ್ಟಣಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಿ ನೀರಿನ ಕೊರತೆ ನಿಗಿಸಿದ್ದರು. ಹೀಗಾಗಿ ಅಂದಿನಿಂದ ಮೂರು ಪಟ್ಟಣಗಳಿಗಳಿಗೆ ಸರಾಗವಾಗಿ ನೀರು ಸರಬುರಾಜು ಮಾಡುವ ಕಾರ್ಯ ಸಾಗಿ ಬಂದಿದೆ.

ಪಟ್ಟಣಗಳಿಗೆ ನೀರುವ ವಿತರಿಸುವ ಜತೆಗೆ ಕೆರೆ,ಕಟ್ಟಿಗಳ ಅಂಜರಜಲ ಹೆಚ್ಚಿಸಲಾಗಿದೆ. ಕೆರೆ ಕಟ್ಟಿಗಳು ಸುತ್ತಲಿಗೆ ಕೊಳವೆಭಾವಿಗಳು ನೀರು ತುಂಬಿ ರೈತರ ಜಮೀನುಗಳಿಗೆ ನೀರಾವರಿ ಯೋಜನೆಗೆ ನೆರವಾಗಿದೆ. ನಿತ್ಯ ಮನೆ,ಮನೆಗಳಿಗೆ ನಳಗಳ ಮೂಲಕ ನೀರು ಬರುತ್ತಿವೆ. ನೀರಿನ ಬವಣೆ ದೂರಾದ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ಹರ್ಷಚಿತ್ತರಾಗಿದ್ದಾರೆ. ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೋಗಿ ಕರೆ ನೀರನ್ನು ಪೂಜಿಸುತ್ತಿರುವುದ ಕಂಡು ಬಂದಿತು.

ನಿತ್ಯ ನೀರು

ಕಳೆದ ಬೇಸಿಗೆಯಲ್ಲಿ ನಾಗನೂರ ಕರೆ ನೀರಿನ ಮಟ್ಟ ಕುಗ್ಗಿ ಹೋಗಿತ್ತು. ಸತತ ಮಳೆಯಿಂದಾಗಿ ಮತ್ತು ವರದಾ ನದಿಯ ನೀರು ಹರಿದು ಬರುವ ಕಾರಣ ಬೇಗನೆ ಕೆರೆ ತುಂಬಲಿದೆ. ಹಿಂದೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿತು. ಈಗ 4ರಿಂದ 5ದಿನಕ್ಜಕೊಮ್ಮೆ ನೀರು ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್ ಹೇಳಿದರು.

ಶಿಗ್ಗಾವಿ ಪಟ್ಟಣದ ನಾಗನೂರ ಕೆರೆ ಹತ್ತಿರದಲ್ಲಿರುವ ನೀರು ಶುದ್ಧಿಕರಣದ ಪಂಪಹೌಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.