ADVERTISEMENT

ಚುನಾವಣೆಯಲ್ಲಿ ಸೋಲು–ಗೆಲುವು ಸಹಜ: ಶಾಸಕ ಕೋಳಿವಾಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 16:17 IST
Last Updated 18 ಜೂನ್ 2024, 16:17 IST
ರಾಣೆಬೆನ್ನೂರಿನ ವಿನಾಯಕನಗರದ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆಯ ಆತ್ಮಾವಲೋಕನ ಸಭೆಯಲ್ಲಿ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿದರು
ರಾಣೆಬೆನ್ನೂರಿನ ವಿನಾಯಕನಗರದ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆಯ ಆತ್ಮಾವಲೋಕನ ಸಭೆಯಲ್ಲಿ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿದರು   

ರಾಣೆಬೆನ್ನೂರು: ‘ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಸಹಜ ಪ್ರಕ್ರಿಯೆ. ಯಾರೂ ಸೋಲು ಎಂದು ಭಾವಿಸಬೇಡಿ. ಯಾರನ್ನೂ ದೂರ ಬೇಡಿ. ದ್ವೇಷಿಸದಿರಿ. ಮತಗಳ ಅಂತರವನ್ನು ಗಮನಿಸಿದರೆ ಗೆಲುವು ನಮ್ಮದೇ ಆಗಿದೆ’ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಇಲ್ಲಿನ ವಿನಾಯಕ ನಗರದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಆತ್ಮಾವಲೋಕನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ಗೆ 137 ವರ್ಷಗಳ ಭವ್ಯ ಇತಿಹಾಸ ಇದೆ. ಇದು ಬಹುದೊಡ್ಡ ಆಲದಮರ ಇದ್ದಂತೆ. ಮತದಾರರು ಈಗಾಗಲೇ ಉತ್ತರದಲ್ಲಿ ಬಿಜೆಪಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಮುಂದೆ ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದರು.

ADVERTISEMENT

‘ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಗರ ಪ್ರದೇಶದಲ್ಲಿ ಮೋದಿಗೆ ಯುವಕರ ಮತಗಳು ತಿರುಗಿವೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದಲ್ಲ. ಭವಿಷ್ಯದ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು’ ಎಂದರು.

ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಮುಖಂಡರ ಮತ್ತು ಕಾರ್ಯಕರ್ತರ ಸಂಪರ್ಕವಿಲ್ಲದ ನನಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂಬ ಏಕೈಕ ಕಾರಣಕ್ಕಾಗಿ ಹೆಚ್ಚು ಮತಗಳನ್ನು ನೀಡಿರುವುದು ಸಂತಸವಾಗಿದೆ’ ಎಂದರು.

ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ, ಯುವ ಅಧ್ಯಕ್ಷ ಬಿರೇಶ್, ರವೀಂದ್ರಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ರುಕ್ಮಿಣಿ ಬಾಯಿ ಸಾಹುಕಾರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ತಿರುಪತಿ ಅಜ್ಜನವರ, ವೆಂಕಟೇಶ ಬಣಕಾರ, ನೀಲಕಂಠಪ್ಪ ಕುಸಗೂರ, ಕೃಷ್ಣಪ್ಪ ಕಂಬಳಿ, ಸಿದ್ದಪ್ಪ ಅಂಬಲಿ, ರಾಜಣ್ಣ ಮೋಟಗಿ, ಬಿ.ಬಿ. ನಂದ್ಯಾಲ, ಮಹೇಶ್ ಅಡಿವೆಪ್ಪನವರ್, ಜಯಶ್ರೀ ಪಿಶೆ, ರಾಮಣ್ಣ ನಾಯಕ, ಸಣ್ಣತಮ್ಮಪ್ಪ ಬಾರ್ಕಿ, ಬಸನಗೌಡ ಮರದ, ಗಿರೀಶ್ ಹೆಗ್ಗಪ್ಪನವರ, ಚಂದ್ರಪ್ಪ ಬೇಡರ್, ವಿ.ಎಂ. ಜೊಗಾರ, ಇರ್ಫಾನ್ ದಿಡಗೂರ್, ಮಹೇಶ ಕೆಂಚರೆಡ್ಡಿ, ಸೀತಾರಾಮರಡ್ಡಿ, ಮಧು ಕೋಳಿವಾಡ, ವಿರೇಶ ಬಾಳೆಹಳ್ಳಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.