ADVERTISEMENT

‘ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 19:02 IST
Last Updated 10 ಜುಲೈ 2018, 19:02 IST

ಬೆಂಗಳೂರು:‘ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ’‌ ಎಂದು ಉತ್ತರ ಕರ್ನಾಟಕ ಜನಜಾಗೃತಿ ವೇದಿಕೆ ದೂರಿದೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷೆ ಮಂಗಳಾ ನಾಗರಾಜ್‌, ‘ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ. ಸಂಪುಟದಲ್ಲಿ ‌ಖಾಲಿ ಇರುವ 7ಸ್ಥಾನಗಳಲ್ಲಿ ಐದನ್ನಾದರೂ ಆ ಭಾಗದ ಶಾಸಕರಿಗೆ ನೀಡಬೇಕು’ ಎಂದು ಆಗ್ರಹಿಸಿದರು.

ಐದು ಎಕರೆಗಿಂತ ಅಧಿಕ ಭೂಮಿ ಹೊಂದಿರುವ ಒಣ ಬೇಸಾಯ ರೈತರ ಸಾಲವೂ ಮನ್ನಾ ಆಗಬೇಕು. ಹೈದರಾಬಾದ್‌– ಕರ್ನಾಟಕ ಜಿಲ್ಲೆಗಳಲ್ಲಿ ಸರ್ಕಾರಿ ಸೇವೆಗೆ ನೇಮಕಗೊಂಡವರಿಗೆ 2 ವರ್ಷ ವರ್ಗಾವಣೆ ಮಾಡಬಾರದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.