ADVERTISEMENT

ಮಳಖೇಡ: ವಿಜೃಂಭಣೆಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಸೇಡಂ: ಇಂದ್ರಿಯ ಸುಖ ಭೋಗಗಳಿಂದ ಮುಕ್ತರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಉತ್ತರಾದಿಮಠದ ಪರಿಸರದಲ್ಲಿ ಸೇರಿದ್ದು ವಿಶೇಷವಾಗಿತ್ತು.

ಬುಧವಾರ ಶ್ರೀ ಟೀಕಾಕೃತ್ಪಾದರ 624ನೇ ಆರಾಧನಾ ಮಹೋತ್ಸವ ಅಂಗವಾಗಿ ಜರುಗಿದ ರಥೋತ್ಸವದಲ್ಲಿ ಕಂಡು ಬಂದ ಸಾಮಾನ್ಯ ದೃಶ್ಯ ಅದಾಗಿತ್ತು. ಭಕ್ತರೆಲ್ಲರೂ ತಟದಲ್ಲಿ ದ್ರವ ರೂಪದಲ್ಲಿ ಹರಿಯುವ ಕಾಗಿಣಾ ನದಿಯಲ್ಲಿ ಮಿಂದು ತಮ್ಮ ಪಾಪಗಳಿಂದ ಮುಕ್ತರಾದೆವು ಎಂಬು ಧನ್ಯತಾ ಭಾವನೆ ಎಲ್ಲರ ವೆಾಗದಲ್ಲಿ ಕಂಡು ಬರುತ್ತಿತ್ತು. ಭಗವಂತನಲ್ಲಿ ನಿರ್ಮಲ ಮನಸ್ಸಿನಿಂದ ಭಕ್ತಿಯನ್ನು ಸಮರ್ಪಿಸುವಲ್ಲಿ ಅನೇಕರು ಭಕ್ತಿ ಗೀತೆ, ದಾಸರ ವೇಷಗಳಿಂದ ಪದಗಳು ಹೊರಹೊಮ್ಮಿದವುು.

ವರರೂಪವಾದ ಭಗವಂತನ ಪ್ರಸಾದವನ್ನು ಪಡೆಯುವಲ್ಲಿ ಅಚ್ಚು ಕಟ್ಟಾದ ಪಂಕ್ತಿ ಮತ್ತು ಶಿಸ್ತು ಕಾಪಾಡುವಲ್ಲಿ ಇಂದ್ರಭವನ ಮಠದ ಪೀಠಾಧಿಪತಿ ಪೂಜ್ಯ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ಲೋಕಾರ್ಪಣೆ ಮಾಡಿದರು. ಈ ಎಲ್ಲವೂ ನಮಗೆ ಅನುಗ್ರಹಿಸಬೇಕು ಎನ್ನುವುದೇ `ಇಂದ್ರ ಭವನ~ ಕೋಟಿ ಪುಷ್ಪಾರ್ಚನೆ ಮೂಲಕ ಸಮರ್ಪಣೆಗೊಂಡಿತು. ತದನಂತರ ಜರುಗಿದ ರಥೋತ್ಸವದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಗೀತೆ ಎಲ್ಲರ ಮನಸೊರಗೊಂಡಿತು. ಮಂತ್ರ, ವಾದ್ಯ, ಘೋಷಣೆಗಳು ಮುಗಿಲು ಮುಟ್ಟುವಂತಿತ್ತು.

ಪಂಚಾಮೃತ ಅಭಿಷೇಕ, ಶ್ರೀಗಳವರಿಂದ ಸುಧಾ ಪಾಠ, ವಿದ್ಯಾ ಪೀಠದ ವಿದ್ಯಾರ್ಥಿಗಳಿಂದ ಜಿಜ್ಞಾಸಾಧಿಕರಣ ಅನುವಾದ ಹಾಗೂ ಮಂಗಳ ಮಹೋತ್ಸವ ಜರುಗಿತು. ಶ್ರೀಗಳವರು ನೀಡಿದ ಅನಗ್ರಹ ಸಂದೇಶದಲ್ಲಿ ಮನು ಜ್ಞಾನದ ಸಂಕೇತ, ಜ್ಞಾನ ಹೊಂದಿದವನೇ ಮಾನವ, ಇದು ಸರ್ವ ಶ್ರೇಷ್ಠ. ಜೀವನವಿಡಿ ಇದರ ಸದ್ಬಳಕೆಗೆ ಭಗವಂತನ ಸ್ಮರಣೆ ಅಗತ್ಯ ಎಂದರು.

ಇದೇ ಸಂದರ್ಭದಲ್ಲಿ ಕೋಟಿ ಶ್ರೀ ವಿಷ್ಣು ಸಹಸ್ರನಾಮ ಪಠಣ ಮಾಡುವಂತೆ ಸಂದೇಶ ನೀಡಿದರು. ತದನಂತರ ಶ್ರೀ ಮೂಲ ರಾಮದೇವರ ಪೂಜೆ ನೆರವೆರಿಸಿದರು. ಮಠದ ಪರವಾಗಿ ತೀರ್ಥ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಾರಾಷ್ಟ್ರದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಈ ಸಾಲಿನ ರಥೋತ್ಸವದ ವಿಶೇಷವಾಗಿತ್ತು. ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆ ಆಂಧ್ರಪ್ರದೇಶದ ಭಕ್ತರು ಆಗಮಿಸಿದ್ದರು.

ಅಚ್ಚು ಕಟ್ಟಾಗಿ ಸಾಗಿದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ರೂವಾರಿ ಮಠದ ವ್ಯವಸ್ಥಾಪಕ ಮತ್ತು ವಿದ್ಯಾ ಪೀಠದ ಕುಲಪತಿ ಪಂ. ವೆಂಕಣ್ಣಾಚಾರ ಪೂಜಾರ ಅವರ ವರ್ಷವಿಡಿ ಶ್ರಮ ಮೆಚ್ಚುವಂತಹದ್ದಾಗಿತ್ತು. ಬಲ್ಲ ಮೂಲಗಳಿಂದ ಸುಮಾರು 15 ಸಾವಿರಕ್ಕೂ ಮಿಕ್ಕು ಭಕ್ತರು ಆಗಮಿಸಿದ್ದರು. ಆಪೇಕ್ಷಿತ ಭಕ್ತರಿಗೆ ಶ್ರೀಪಾದಂಗಳವರು  ಮುದ್ರಾಧಾರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.