ADVERTISEMENT

ಕಲಬುರಗಿ | ಒಂದೇ ಕುಟುಂಬದಿಂದ 30 ಮತ ಚಲಾವಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 15:59 IST
Last Updated 7 ಮೇ 2024, 15:59 IST
ಕಲಬುರಗಿಯ ಸಂಗಮೇಶ್ವರ ಕಾಲೊನಿಯಲ್ಲಿನ ಮತಗಟ್ಟೆಯಲ್ಲಿ ಮಂಗಳವಾರ ಮೋಹನ್ ಸೀತನೂರು ಕುಟುಂಬದ ಸದಸ್ಯರು ಒಟ್ಟಾಗಿ ಮತದಾನ ಮಾಡಿದ ಬಳಿಕ ಕೈಬೆರಳಿಗೆ ಶಾಹಿ ಗುರುತು ಹಾಕಿರುವುದನ್ನು ಪ್ರದರ್ಶಿಸಿದರು
ಕಲಬುರಗಿಯ ಸಂಗಮೇಶ್ವರ ಕಾಲೊನಿಯಲ್ಲಿನ ಮತಗಟ್ಟೆಯಲ್ಲಿ ಮಂಗಳವಾರ ಮೋಹನ್ ಸೀತನೂರು ಕುಟುಂಬದ ಸದಸ್ಯರು ಒಟ್ಟಾಗಿ ಮತದಾನ ಮಾಡಿದ ಬಳಿಕ ಕೈಬೆರಳಿಗೆ ಶಾಹಿ ಗುರುತು ಹಾಕಿರುವುದನ್ನು ಪ್ರದರ್ಶಿಸಿದರು   

ಕಲಬುರಗಿ: ನಗರದ ಸಂಗಮೇಶ್ವರ ಕಾಲೊನಿಯಲ್ಲಿನ 137ನೇ ಮತಗಟ್ಟೆಗೆ ಬಂದ ಒಂದೇ ಕುಟುಂಬದ 30 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

ಸಂಗಮೇಶ್ವರ ಕಾಲೊನಿ ನಿವಾಸಿ ಮೋಹನ್ ಸೀತನೂರು ಕುಟುಂಬದ ಆರು ಜನ ಸಹೋದರರು, ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 30 ಮತದಾರರು ಮಂಗಳವಾರ ತಮ್ಮ ಹಕ್ಕು ಚಲಾಯಿಸಿದರು. ಮೋಹನ್ ಅವರ ಮಕ್ಕಳು ಹೈದರಾಬಾದ್, ಮುಂಬೈ ಹಾಗೂ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದು, ಮತದಾನಕ್ಕಾಗಿ ತವರಿಗೆ ಬಂದರು.

‘ನಮ್ಮದು ಕೂಡು ಕುಟುಂಬ. ಯಾವುದೇ ಚುನಾವಣೆ ಬಂದರೂ ಒಟ್ಟಾಗಿ ಬಂದು ಮತ ಚಲಾಯಿಸುತ್ತೇವೆ. ಕುಟುಂಬ ಸದಸ್ಯರೆಲ್ಲರೂ ಬಂದು ಸಾಂವಿಧಾನಿಕ ಹಕ್ಕು ಚಲಾಯಿಸುವುದು ಖುಷಿಯ ವಿಚಾರ. ದೇಶದ ಭವಿಷ್ಯಕ್ಕಾಗಿ ಮತ ಹಾಕುವುದು ಪ್ರತಿಯೊಬ್ಬರು ಜವಾಬ್ದಾರಿ’ ಎಂದು ಕುಟುಂಬದ ಸದಸ್ಯರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.