ಕಲಬುರ್ಗಿ: ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಕ್ರಮವಾಗಿ ಇಲ್ಲಿನ ಸಂಜೀವ ನಗರ ಮತ್ತು ಸುಂದರ ನಗರದ ಕೊಳೆಗೇರಿ ಪ್ರದೇಶಗಳ ಮನೆಯಲ್ಲಿ ಶನಿವಾರ ವಾಸ್ತವ್ಯ ಮಾಡಿದರು.
‘ಲಕ್ಷ್ಮಣ ಜೇವಳಗಿ ಮತ್ತು ಮಲ್ಲಮ್ಮ ಚಿಂಚೋಳಿ ಅವರ ಕುಟುಂಬದ ಸದಸ್ಯರ ಜತೆ ಸಮಾಲೋಚನೆ ನಡೆಸಿದ ಶಾಸಕರು, ಅವರ ಕಷ್ಟಗಳನ್ನು ಆಲಿಸಿದರು. ಸರ್ಕಾರದಿಂದ ದೊರಕಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಅಲ್ಲದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರಿಸಿದರು’ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.
ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಜನರ ಸಂಕಷ್ಟ ಅರಿತು ಪರಿಹಾರ ಕಲ್ಪಿಸಲು ಬಿಜೆಪಿ ಸ್ಲಂ ಮೋರ್ಚಾ ಈಗಾಗಲೇ ಸಮೀಕ್ಷೆ ನಡೆಸಿದ್ದು, ‘ಸ್ಲಮ್ ದುರ್ಭಾಗ್ಯ–ಇದು ನಾಗರಿಕತೆಯಲ್ಲ ನರಕದ ಕತೆ’ ಎಂಬ ಪುಸ್ತಕ ಸಿದ್ಧಪಡಿಸಿದೆ. ಇದನ್ನು ಫೆ. 11ರಂದು ಬಿಡುಗಡೆ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.