ADVERTISEMENT

‘ಗ್ರಾಮೀಣರಲ್ಲಿ ಅಕ್ಷರ ಪ್ರೀತಿ ಬೆಳೆಸುವ ಪುಸ್ತಕ ಗೂಡು’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:57 IST
Last Updated 22 ನವೆಂಬರ್ 2024, 15:57 IST
ಅರಕೇರಾ ತಾಲ್ಲೂಕಿನ ಜಾಗೀರಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕ್ಕಮದಿನ್ನಿ ಗ್ರಾಮದಲ್ಲಿ ಪ್ರಥಮ ಪುಸ್ತಕ ಗೂಡು ಇಒ ಬಸವರಾಜ ಉದ್ಘಾಟಿಸಿದರು.
ಅರಕೇರಾ ತಾಲ್ಲೂಕಿನ ಜಾಗೀರಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕ್ಕಮದಿನ್ನಿ ಗ್ರಾಮದಲ್ಲಿ ಪ್ರಥಮ ಪುಸ್ತಕ ಗೂಡು ಇಒ ಬಸವರಾಜ ಉದ್ಘಾಟಿಸಿದರು.   

ಮರಕ್ಕಮದಿನ್ನಿ (ದೇವದುರ್ಗ): ‘ಸಾರ್ವಜನಿಕ ಸ್ಥಳಗಳಲ್ಲಿ ‘ಪುಸ್ತಕ ಗೂಡು’ ಇಟ್ಟು ಜನರಲ್ಲಿ ಓದುವ ಅಭಿರುಚಿ ಹುಟ್ಟಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾರಂಭಿಸಿದೆ’ ಎಂದು ದೇವದುರ್ಗ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹಟ್ಟಿ ಹೇಳಿದರು.

ಅರಕೇರಾ ತಾಲ್ಲೂಕಿನ ಜಾಗೀರಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕ್ಕಮದಿನ್ನಿ ಗ್ರಾಮದ ಅಗಸಿಯಲ್ಲಿ ಸ್ಥಾಪಿಸಿ ತಾಲ್ಲೂಕಿನ ಪ್ರಥಮ ಪುಸ್ತಕ ಗೂಡು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂಬರುವ ದಿನಗಳಲ್ಲಿ ಅರಕೇರಾ ಮತ್ತು ದೇವದುರ್ಗ ತಾಲ್ಲೂಕಿನಾದ್ಯಂತ ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ‘ಪುಸ್ತಕ ಗೂಡು’ ಅಳವಡಿಸುವ ಮೂಲಕ ಓದುಗರಿಗೆ ಪುಸ್ತಕಗಳು ಸುಲಭವಾಗಿ ಲಭ್ಯ ಆಗುವಂತೆ ನೋಡಿಕೊಳ್ಳಲಾಗುವುದು. ಜನರು ತಮ್ಮ ಬಿಡುವಿನ ವೇಳೆಯಲ್ಲಿ ಆ ಪುಸ್ತಕಗಳನ್ನು ಓದಿಗಾಗಿ ಬಳಸಿಕೊಂಡು ಮತ್ತೆ ಅದೇ ಗೂಡಿನಲ್ಲಿ ಸುರಕ್ಷಿತವಾಗಿಡುವಂತಹ ಜವಾಬ್ದಾರಿ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

ಏನಿದು ಪುಸ್ತಕ ಗೂಡು: ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಇರುವ ಊರಿನ ಪ್ರಮುಖ ಸ್ಥಳಗಳಲ್ಲಿ ಪುಟ್ಟಗೂಡು ರಚಿಸಿ, ಪುಸ್ತಕಗಳನ್ನು ಇಡಲಾಗುತ್ತದೆ. ನಾಗರಿಕರು ಕುತೂಹಲ ದಿಂದ ಪುಸ್ತಕಗಳನ್ನು ಕೈಗೆತ್ತಿಕೊಂಡು, ಕಣ್ಣು ಹಾಯಿಸುತ್ತಾರೆ.

ಅರಕೇರಾ ತಾಲ್ಲೂಕು ರಾಜೀವಗಾಂಧಿ ಪಂಚಾಯಿತ್ ರಾಜ್ ಫೇಲೊ ಅಧಿಕಾರಿ ನೌಷದ್ ಅಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಹದೆಮ್ಮ, ಉಪಾಧ್ಯಕ್ಷ ಚನ್ನಬಸವ ಗೌಡ, ಪಿಡಿಒ ಮುರುಳಿ ಮೋಹನ, ಮುಖಂಡರಾದ ಮಲ್ಲಿಕಾರ್ಜುನ, ಬಸವರಾಜ, ಪಂಚಾಯಿತಿ ಸದಸ್ಯರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.