ADVERTISEMENT

ಮಣ್ಣೂರು; ವೇದೇಶತೀರ್ಥರ ಉತ್ತರಾರಾಧನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:23 IST
Last Updated 8 ನವೆಂಬರ್ 2024, 16:23 IST
ಅಫಜಲಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಮಣ್ಣೂರಿನಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ವೇದೇಶತೀರ್ಥರ ಉತ್ತರಾರಾಧನೆ ಮಹೋತ್ಸವದಲ್ಲಿ ಐ ಆಚಾರ್ಯ ಮಾಡುತ್ತಿರುವುದು
ಅಫಜಲಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಮಣ್ಣೂರಿನಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ವೇದೇಶತೀರ್ಥರ ಉತ್ತರಾರಾಧನೆ ಮಹೋತ್ಸವದಲ್ಲಿ ಐ ಆಚಾರ್ಯ ಮಾಡುತ್ತಿರುವುದು   

ಅಫಜಲಪುರ: ತಾಲ್ಲೂಕಿನ ಮಣ್ಣೂರು ಗ್ರಾಮದ ಉತ್ತರಾದಿ ಮಠಾಧೀಶರಾದ ವೇದೇಶತೀರ್ಥರ ಉತ್ತರಾರಾಧನೆ ಮಹೋತ್ಸವ ಜರುಗಿತು.

ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ನಂತರ ಸತ್ಯಾತ್ಮತೀರ್ಥ ಶ್ರೀಗಳಿಂದ ಚನ್ನಕೇಶವ ದೇವರಿಗೆ ಪಂಚಾಮೃತ ಅಭಿಷೇಕ ಗುರುಗಳಿಂದ ಶ್ರೀಮದ್ ಭಾಗವತ ಪಾಠ ಭಕ್ತಾದಿಗಳಿಗೆ ಮುದ್ರಾಧಾರಣೆ, 11 ಗಂಟೆಗೆ ಗಜವಾಹನೋತ್ಸವ ಗ್ರಾಮದ ಪಾಂಡುರಂಗ ದೇವಸ್ಥಾನದಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ ವಾದ್ಯ  ವೇದೇಶತೀರ್ಥ ವಿದ್ಯಾಪೀಠದವರೆಗೆ ಜರುಗಿತು.

ಭಜನಾ ಮಂಡಳಿಗಳಿಂದ ಭಜನೆ, ಪಲ್ಲಕ್ಕಿ ಉತ್ಸವ, ಶ್ರೀಗಳಿಂದ ಸಂಸ್ಥಾನ ಪೂಜೆ, ಗುರುಗಳಿಗೆ ಮಹಾ ಪಂಚಾಮೃತ ಅಭಿಷೇಕ, ಅಲಂಕಾರ ಹಸ್ತೋದಕ, ತೀರ್ಥ ಪ್ರಸಾದ, ನ್ಯಾಯಸುಧಾ ಗ್ರಂಥದ ಮೆರವಣಿಗೆ ನಡೆಯಿತು.

ADVERTISEMENT

ಸಂಜೆ ಭಜನೆ, ಪಲ್ಲಕ್ಕಿ ಉತ್ಸವ, ಸ್ವಸ್ತಿ ವಾಚನ, ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ, ವಿದ್ವಾಂಸರಿಂದ ಉಪನ್ಯಾಸ ಸನ್ಮಾನ ಸಮಾರಂಭ, ಗ್ರಂಥಗಳ ಬಿಡುಗಡೆ, ವಿಶ್ವಪ್ರಜ್ಞಾಚಾರ್ಯರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶೌರ್ಯಚಕ್ರ ಪುರಸ್ಕೃತ ಎಂ.ವಿ.ಪ್ರಾಂಜಲ್ ಸ್ಮರಣಾರ್ಥ ಯೋಧ ನಮನಂ ರಾಷ್ಟ್ರ ನಮನಂ ಕಾರ್ಯಕ್ರಮ, ಸತ್ಯಾತ್ಮ ತೀರ್ಥರಿಂದ ಅನುಗ್ರಹ ಸಂದೇಶ, ಮೈಸೂರು ರಾಮಚಂದ್ರ ಆಚಾರ ಇವರಿಂದ ಸಚಿತ್ರ ದಾಸವಾಣಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.