ಅಫಜಲಪುರ: ಇಲ್ಲಿನ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿನ ತ್ಯಾಜ್ಯ ವಸ್ತುವನ್ನು ಬಸ್ ನಿಲ್ದಾಣದ ರಸ್ತೆಯ ಮೇಲೆ ಚೆಲ್ಲಿದ್ದರಿಂದ ಸಂಚಾರಕ್ಕಾಗಿ ಪ್ರಯಾಣಿಕರು ಪರದಾಡಿದರು.
ಬಸ್ ನಿಲ್ದಾಣದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ಪ್ರತಿನಿತ್ಯವೂ ಕ್ಯಾಂಟೀನಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನ ರಸ್ತೆಯ ಮೇಲೆ ಬಿಸಾಡುತ್ತಾರೆ. ಅಲ್ಲಿ ಯಾವುದೇ ತ್ಯಾಜ್ಯ ವಸ್ತುವನ್ನು ಸಂಗ್ರಹಿಡಲು ವ್ಯವಸ್ಥೆ ಇಲ್ಲ. ಜನರು ಮತ್ತು ವಾಹನಗಳು ತ್ಯಾಜ್ಯ ವಸ್ತುಗಳ ಮೇಲೆ ಸಂಚಾರ ಮಾಡುವುದರಿಂದ ಅನಾರೋಗ್ಯದ ಭೀತಿ ಎದುರಾಗಿದೆ.
ಬಸ್ ನಿಲ್ದಾಣದಲ್ಲಿ ಶೌಚಾಲಯ ಬದಿಯಲ್ಲಿ ಇರುವ ಕಸದ ತೊಟ್ಟಿ ತುಂಬಿ ನೇಕ ದಿನಗಳಾದರೂ ಖಾಲಿ ಮಾಡುತ್ತಿಲ್ಲ. ತ್ಯಾಜ್ಯವಸ್ತುಗಳು ಕೆಳಗೆ ಬೀಳುತ್ತಿದ್ದು ಹಂದಿಗಳು ವಾಸ ಮಾಡುತ್ತಿವೆ. ಪ್ರಯಾಣಿಕರು ತ್ಯಾಜ್ಯ ವಸ್ತುವಿನ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ ಹೀಗಾಗಿ ಮತ್ತಷ್ಟು ವಾತಾವರಣ ಮಾಲಿನ್ಯವಾಗುತ್ತಿದೆ. ಸಂಬಂಧಪಟ್ಟ ಬಸ್ ಡಿಪೋ ವ್ಯವಸ್ಥಾಪಕರು ಕ್ರಮ ಜರುಗಿಸಬೇಕು ಎನ್ನುವುದು ಪ್ರಯಾಣಿಕರು ಆಗ್ರಹ.
ಪುರಸಭೆಯವರು ಮತ್ತು ಪರಿಸರ ಮಾಲಿನ್ಯ ಇಲಾಖೆಯವರು ಬಸ್ ನಿಲ್ದಾಣದ ಕ್ಯಾಂಟೀನ್ ಪರಿಶೀಲನೆ ಮಾಡಬೇಕು. ತ್ಯಾಜ್ಯ ವಸ್ತುಗಳನ್ನ ಸರಿಯಾಗಿ ವಿಲೇವಾರಿ ಮಾಡುವಂತೆ ಕ್ರಮ ಜರಿಸಬೇಕು ಇಲ್ಲದಿದ್ದರೆ ಬಸ್ ನಿಲ್ದಾಣ ಕಾಯಿಲೆಗಳ ಉತ್ಪಾದನೆ ಕೇಂದ್ರವಾಗುತ್ತದೆ ಎಂದು ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಎಲ್.ಪಟೇಲ್, ಸದಸ್ಯ ಸುರೇಶ ಅವಟೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.