ADVERTISEMENT

ಅಫಜಲಪುರ ಪುರಸಭೆ: ಸೆ.3 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 5:05 IST
Last Updated 28 ಆಗಸ್ಟ್ 2024, 5:05 IST
ಅಫಜಲಪುರ ಪುರಸಭೆ ಕಾರ್ಯಾಲಯ.
ಅಫಜಲಪುರ ಪುರಸಭೆ ಕಾರ್ಯಾಲಯ.   

ಅಫಜಲಪುರ: ‘ಸೆ.3ರಂದು ಪಟ್ಟಣದ ಪುರಸಭೆಯ ಹತ್ತನೇ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲಾಗುತ್ತದೆ’ ಎಂದು ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರರಾಗಿರುವ ಸಂಜು ಕುಮಾರ್ ದಾಸರ್ ಹಾಗೂ ಪುರಸಭೆಯ ಮುಖ್ಯ ಅಧಿಕಾರಿ ವಿಜಯಮಹಾಂತೇಶ ಹೂಗಾರ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ‘ಬ’ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಿದೆ.

ಸೆ.3ರಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆ ಒಳಗೆ ನಾಮಪತ್ರ ಸ್ವೀಕರಿಸಲಾಗುವುದ, ಮಧ್ಯಾಹ್ನ 1 ಗಂಟೆಯಿಂದ 1.15ರ ವರೆಗೆ ಪರಿಶೀಲನೆ ಮಾಡಲಾಗುವುದು. 1.30 ಗಂಟೆ ರವರೆಗೆ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಸಮಯ ಇರುತ್ತದೆ. 1.30ಕ್ಕೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಪುರಸಭೆ ಸದಸ್ಯರು, ಮತಕ್ಷೇತ್ರದ ವಿಧಾನಸಭಾ ಸದಸ್ಯರು, ಕಲಬುರಗಿ ಲೋಕಸಭಾ ಸದಸ್ಯರು ಸೆ.3 ರಂದು ಪುರಸಭೆ ಕಾರ್ಯಾಲಯದಲ್ಲಿ ಹಾಜರಿರಲು ಕೋರಲಾಗಿದೆ. ಸದಸ್ಯರು ಚುನಾವಣೆಗೆ ಬರುವಾಗ ಚುನಾಯಿತ ಪ್ರಮಾಣ ಪತ್ರ ತರಬೇಕು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.