ADVERTISEMENT

ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 6:47 IST
Last Updated 12 ಡಿಸೆಂಬರ್ 2023, 6:47 IST

ಕಲಬುರಗಿ: ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಸೋಮವಾರ ದಾಳಿ ಮಾಡಿದ ಕೃಷಿ ಅಧಿಕಾರಿಗಳ ತಂಡ, ಸಂಶಯಾಸ್ಪದ ಕೀಟನಾಶಕಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಕರಗಳ ಮಾರಾಟಕ್ಕೆ ತಡೆಯೊಡ್ಡಿತು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದಲ್ಲಿ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ–1) ಚಂದ್ರಕಾಂತ ಜೀವಣಗಿ ಸೇರಿ ಇತರೆ ಅಧಿಕಾರಿಗಳು ಗಂಜ್ ಪ್ರದೇಶದ ಕೃಷಿ ಮಳಿಗೆಗಳ ಮೇಲೆ ಮಾಡಿದರು.

ಕಾರ್ಯಾಚರಣೆಯಲ್ಲಿ ಸಂಶಯಾಸ್ಪದ 9 ಕೀಟನಾಶಕಗಳು ಪತ್ತೆ ಹಚ್ಚಿದರು. ಪರೀಕ್ಷೆಗಾಗಿ ಅವುಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದರು. ಅಸಮರ್ಪಕ ದಾಖಲಾತಿಗಳ ನಿರ್ವಹಣೆ ಮಾಡಿದ ವಿಜಯಲಕ್ಷ್ಮಿ ಆಗ್ರೊ ಏಜೆನ್ಸಿ, ಶಾಂತಾ ಆಗ್ರೊ ಕೇಂದ್ರ, ಪ್ರೀತಿ ಆಗ್ರೊ ಮತ್ತು ಅಮರನಾಥ ಕೃಷಿ ಕೇಂದ್ರ ಮಳಿಗೆಗಳಿಗೆ ಪರಿಕರ ಮಾರಾಟ ತಡೆ ಆದೇಶ ನೀಡಿದರು.

ADVERTISEMENT

ರೈತರು ಕೃಷಿ ಪರಿಕರಗಳನ್ನು ಖರೀದಿಸಿದ ಬಳಿಕ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.