ಆಳಂದ: ‘ತಾಲ್ಲೂಕಿನ ಭೂಸನೂರ ಗ್ರಾಮದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಮುನ್ನ ಪ್ರತಿ ಟನ್‌ಗೆ ಬೆಲೆ ನಿಗದಿ ಮಾಡಬೇಕು’ ಎಂದು ಕಬ್ಬು ಬೆಳೆಗಾರ ರೈತರು ಹಾಗೂ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿಯೋಗ ಗುತ್ತಿಗೆ ಪಡೆದ ಕಾರ್ಖಾನೆ ಉಪಾಧ್ಯಕ್ಷ ಭಾಸ್ಕರ್ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗಜಂಗಮ ಎಸ್.ಪಾಟೀಲ್ ಧಂಗಾಪೂರ, ಕಲಬುರಗಿ-ಬೀದರ-ಯಾದಗಿರ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಗುರುವಾರ ಕಾರ್ಖಾನೆಗೆ ತೆರಳಿ ರೈತರ ವಿವಿಧ ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆ ವ್ಯಾಪ್ತಿಯ ಆಳಂದ, ಅಫಜಲಪೂರ, ಕಲಬುರಗಿ, ಕಮಲಾಪೂರ ತಾಲ್ಲೂಕಿನ ರೈತರ ಕಬ್ಬನ್ನು ಮೊದಲು ಕಟಾವು ಮಾಡಬೇಕು. ಲಾರಿ ಹಾಗೂ ಲೇಬರ್ ಮತ್ತು ರಾಶಿ ಯಂತ್ರದವರು ರೈತರ ಬಳಿ ಹಣ ಕೇಳುವರ ವಿರುದ್ದ ಎನ್‌ಎಸ್‌ಎಲ್ ಕಾರ್ಖಾನೆಯವರು ಕ್ರಮ ತೆಗೆದುಕೊಳ್ಳಬೇಕು. ರೈತರ ಕಬ್ಬು ಆದ್ಯತೆಯ ಮೇರೆಗೆ ನುರಿಸಬೇಕು, ವಿಳಂಬ ಮಾಡದೆ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ರೈತ ಮುಖಂಡರು ತಿಳಿಸಿದರು.
ಮನವಿ ಆಲಿಸಿದ ಕಾರ್ಖಾನೆ ಉಪಾಧ್ಯಕ್ಷ ಬಾಸ್ಕರೆಡ್ಡಿ, ‘ಸಮಸ್ಯೆಯಾಗದಂತೆ ಯೋಗ್ಯ ಬೆಲೆ ನೀಡುವುದು’ ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಆಳಂದ ಸಹಕಾರಿ ಸಕ್ಕರೆ ಕಾರಖಾನೆ ಆಡಳಿತ ಮಂಡಳಿ ನಿರ್ದೇಶಕ ಧರ್ಮರಾಜ ಸಾಹು ಭೂಸನೂರ, ಶಿವರಾಜ ಪಾಟೀಲ್ ಕೋರಳ್ಳಿ, ಚನ್ನಬಸಪ್ಪ ಪಾಟೀಲ ದಣ್ಣೂರ, ಶಾಂತೇಶ್ವರ ಪಾಟೀಲ ಹೊದಲೂರ, ಪ್ರಶಾಂತ ಪಾಟೀಲ ಭೂಸನೂರ, ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ, ರೈತ ಮುಖಂಡ ರಾಜಶೇಖರ ಯಂಕಂಚಿ, ಸಂಜಯ ಪಾಟೀಲ್, ಮಹಾಂತಪ್ಪ ಯಲಶಟ್ಟಿ, ಚಂದ್ರಶೇಖರ ಪಾಟೀಲ್ ಕೋರಳ್ಳಿ, ರಮೇಶ ಉಡಗಿ ಸೇರಿದಂತೆ ಭೂಸನೂರ, ಕೋರಳ್ಳಿ, ಧಂಗಾಪೂರ, ಜವಳಿ, ದೇವಂತಗಿ ಗ್ರಾಮಗಳ ಕಬ್ಬು ಬೆಳೆಗಾರ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.