ADVERTISEMENT

26ರಿಂದ ಶಿವಲಿಂಗೇಶ್ವರ ಸಾಧು ಮಹಾರಾಜರ ಜಯಂತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:57 IST
Last Updated 21 ನವೆಂಬರ್ 2024, 15:57 IST
ಮಾದನಹಿಪ್ಪರಗಿ ಶರಣ ಶಿವಲಿಂಗೇಶ್ವರರು
ಮಾದನಹಿಪ್ಪರಗಿ ಶರಣ ಶಿವಲಿಂಗೇಶ್ವರರು   

ಆಳಂದ: ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾಮದ ಶಿವಲಿಂಗೇಶ್ವರ ಸಾಧು ಮಹಾರಾಜರ ಶತಮಾನೋತ್ತರ ಸುವರ್ಣ ಮಹೋತ್ಸವದ ನಿಮಿತ್ತ ನ.26ರಿಂದ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ಸದ್ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.

ನ.26 ಸಂಜೆ 7ಗಂಟೆಗೆ ಚಲಗೇರಾ ಶಾಂತವೀರ ಶಿವಾಚಾರ್ಯರು ಹೇಳುತ್ತಿರುವ ಸದ್ಗುರುಗಳ ಪುರಾಣದ ಮಹಾಮಂಗಲದ ಜರುಗಲಿದೆ. ಉಪ್ಪಿನ ಬೇಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ ಹಾಗೂ ಹುಣಶ್ಯಾಳದ ನಿಜಗುಣ ದೇವರು ಸಾನ್ನಿಧ್ಯವಹಿಸುವರು. ವಿವಿಧ ಮಠಾಧೀಶರು ಉಪಸ್ಥಿತರಿರಲಿದ್ದಾರೆ. 

27 ರಂದು ಬೆಳಿಗ್ಗೆ 8ಗಂಟೆಗೆ ಆನೆ ಮೇಲೆ ಅಂಬಾರಿ ಹಾಗೂ ಕುಂಭ ಕಳಸದೊಂದಿಗೆ ಸದ್ಗುರಗಳು ಹಾಗೂ ಶ್ರೀಗುರು ಸಿದ್ದರಾಮ ಶಿವಯೋಗಿಗಳ ಭಾವ ಚಿತ್ರದ ಮತ್ತು ತೊಟ್ಟಲು ಮೆರವಣಿಗೆ ಮತ್ತು ಶರಣರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಲಿದೆ. ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಸಂಜೆ 7ಕ್ಕೆ ಜರುಗುವ ಧರ್ಮಸಭೆಯ ಸಾನ್ನಿಧ್ಯ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು ಹಾಗೂ ವಿಜಯಪುರದ ಅಭಿನವ ಸಿದ್ದಾರೂಢ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ADVERTISEMENT

28 ರಂದು ಬೆಳಿಗ್ಗೆ 8ಗಂಟೆಗೆ ಸದ್ಗುರಗಳ ಭಾವಚಿತ್ರದ ಮೆರವಣಿಗೆ, ಸಂಜೆ 7ಗಂಟೆಗೆ ಧರ್ಮಸಭೆ ಶಿರಹಟ್ಟಿ ದಿಂಗಾಲೇಶ್ವರ ಸ್ವಾಮೀಜಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಇರಲಿದ್ದಾರೆ.

29ರಂದು ಗ್ರಾಮದ ಮುಖ್ಯಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಬೀದರ್ ಸಂಸದ ಸಾಗರ ಖಂಡ್ರೆ, ಶಾಸಕ ಬಿ.ಆರ್.ಪಾಟೀಲ, ಮಾಜಿ ಶಾಸಕ ಸುಭಾಷ ಆರ್.ಗುತ್ತೇದಾರ್, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ ಸಂಗಾ ಸೇರಿ ಅನೇಕ ಮುಖಂಡರುಗಳು ಭಾಗವಹಿಸಿಲಿದ್ದಾರೆ ಸದ್ಭಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.