ADVERTISEMENT

ತೊಗರಿಗೆ ₹15000, ಕಬ್ಬಿಗೆ ₹3500 ನೀಡಿ: ಅಖಿಲ ಭಾರತ ಕಿಸಾನ್‌ ಸಭಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:18 IST
Last Updated 1 ಸೆಪ್ಟೆಂಬರ್ 2024, 15:18 IST
ಭೀಮಾಶಂಕರ ಮಾಡಿಯಾಳ
ಭೀಮಾಶಂಕರ ಮಾಡಿಯಾಳ   

ಕಲಬುರಗಿ: ‘ಪ್ರತಿ ಕ್ವಿಂಟಲ್‌ ತೊಗರಿಗೆ ₹15 ಸಾವಿರ ಬೆಲೆ ನಿಗದಿಪಡಿಸಬೇಕು. ಕಬ್ಬಿಗೆ ಪ್ರತಿ ಟನ್‌ಗೆ ₹3500 ಬೆಲೆ ನಿಗದಿಪಡಿಸಬೇಕು’ ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾಮುಲ್ಲಾ ಆಗ್ರಹಿಸಿದರು.

ಅಖಿಲ ಭಾರತ ಕಿಸಾನ್‌ ಸಭಾದಿಂದ ಆ 30ರಂದು ನಗರದ ಕನ್ನಡ ಭವನದಲ್ಲಿ ನಡೆದ 8ನೇ ಜಿಲ್ಲಾ ಸಮ್ಮೇಳನದ ಹಕ್ಕೊತ್ತಾಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ‘ಸರ್ಕಾರದಿಂದ ನೈಸರ್ಗಿಕ ಸಂಪನ್ಮೂಲ ಬಳಕೆಗೆ ಯೋಜನೆಗಳು ಆಗುತ್ತಿಲ್ಲ. ಉದ್ಯೋಗ ಖಾತ್ರಿ ಹಣ ದುರ್ಬಳಕೆಯಾಗುತ್ತಿದೆ. ನರೇಗಾದಲ್ಲಿ ಭ್ರಷ್ಟಾಚಾರ ಬೆರೆತಿದೆ. ಬರಗಾಲ ಮುಕ್ತ ಭಾರತಕ್ಕಾಗಿ ಯೋಜನೆ ರೂಪಿಸಬೇಕು. ಬೆಳೆವಿಮೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ರೈತ ಸ್ನೇಹಿ ಸಾಲನೀತಿ ಜಾರಿಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ವಾರದಲ್ಲಿಯೇ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಬೇಕು‘ ಎಂದು ಆಗ್ರಹಿಸಿದರು.

ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಜಿಲ್ಲಾ ಮಂಡಳಿ ರಚಿಸಿದ್ದು, 13 ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ADVERTISEMENT

ನೂತನ ಪದಾಧಿಕಾರಿಗಳು: ಭೀಮಾಶಂಕರ ಮಾಡಿಯಾಳ (ಜಿಲ್ಲಾಧ್ಯಕ್ಷ), ಮಹಮ್ಮದ್‌ ಚೌಧರಿ ಕೊಡಚಿ (ಕಾರ್ಯದರ್ಶಿ), ಶರಣಬಸಪ್ಪ ಗಣಜಲಖೇಡ, ಭೀಮಶಾ ಓಕಳಿ, ಕಲ್ಯಾಣಿ ಅವಟೆ, ಮಲ್ಲಿಕಾರ್ಜುನ ಜಾಪುರ (ಉಪಾಧ್ಯಕ್ಷರು), ಭೀಮರಾಯ ಮುದಬಸಪ್ಪಗೋಳ, ಸಿದ್ದಣ್ಣ ಕಣ್ಣೂರ, ಸುನೀಲ ಪಾಟೀಲ, ಲಕ್ಷ್ಮಿ ದೊಡ್ಡಮನಿ, ಲಕ್ಷ್ಮಿಬಾಯಿ ರುದ್ರವಾಡಿ (ಸಹ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಕೆಲ್ಲೂರ (ಖಜಾಂಚಿ), ಪದ್ಮಾಜನ ಜಾನಿಬ (ಹಿರಿಯ ಸಲಹೆಗಾರರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.