ADVERTISEMENT

ಮುಂಬೈ-ಕಲಬುರ್ಗಿ ಮಧ್ಯೆ ವಿಮಾನ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 8:10 IST
Last Updated 25 ಮಾರ್ಚ್ 2021, 8:10 IST
ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ
ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ   

ಕಲಬುರ್ಗಿ: ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ‌ಕರ್ನಾಟಕದ ಪ್ರಮುಖ ‌ನಗರ ಕಲಬುರ್ಗಿ ‌ಮಧ್ಯೆ ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ ಗುರುವಾರದಿಂದ ಆರಂಭವಾಯಿತು.

ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಿಗ್ಗೆ 9.07ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಎಂಟು ಜನ ಪ್ರಯಾಣಿಕರು ಬಂದರು. 9.40ಕ್ಕೆ ಇಲ್ಲಿಂದ ಹೊರಟ ವಿಮಾನದಲ್ಲಿ 22 ಪ್ರಯಾಣಿಕರು ತೆರಳಿದರು.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಜಾಸ್ತಿ ಇರುವುದರಿಂದ ಕೋವಿಡ್ ನೆಗೆಟಿವ್ ‌ಪ್ರಮಾಣಪತ್ರ ತರದ ಪ್ರಯಾಣಿಕರಿಗೆ ನಿಲ್ದಾಣದಲ್ಲೇ ಆರ್ ಟಿ-ಪಿಸಿಆರ್ ತಪಾಸಣೆ ಮಾಡಲಾಯಿತು.

ADVERTISEMENT

ವಿಮಾನ ಇಳಿದ ಕೂಡಲೇ ಅಗ್ನಿಶಾಮಕ ವಾಹನಗಳ ಮೂಲಕ ವಿಮಾನಕ್ಕೆ ಸಾಂಪ್ರದಾಯಿಕ ವಾಟರ್ ಸೆಲ್ಯೂಟ್ ಮಾಡಲಾಯಿತು.

ವಾರದ ಎಲ್ಲ ಏಳು ದಿನವೂ ಮುಂಬೈ-ಕಲಬುರ್ಗಿ ಮಧ್ಯೆ ವಿಮಾನ ಸಂಚರಿಸಲಿದೆ.

ಈಗಾಗಲೇ ಕಲಬುರ್ಗಿಯಿಂದ ಅಲಯನ್ಸ್ ಏರ್ ಮತ್ತು ಸ್ಟಾರ್ ಏರ್ ವಿಮಾನಗಳು ಬೆಂಗಳೂರು, ದೆಹಲಿ (ಹಿಂಡನ್), ತಿರುಪತಿ ಮಧ್ಯೆ ವಿಮಾನ ಸಂಚಾರ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.