ಕಮಲಾಪುರ: ತಾಲ್ಲೂಕಿನ ಚೇಂಗಟಾ ಗ್ರಾಮದ ಹಾದಿ ಬಸವೇಶ್ವರ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಇರಮುಡಿ ಪೂಜೆ ಹಾಗೂ ಮಹಾ ಪಡಿ ಪೂಜೆ ಕಾರ್ಯಕ್ರಮ ಜರುಗಿತು.
ಸದಾಶಿವಪೇಟನ ಗುರುಸ್ವಾಮಿ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಗಿದ್ದು, ಬೆಳಿಗ್ಗೆ ಸ್ವಾಮಿ ಅಯ್ಯಪ್ಪ ಮೂರ್ತಿಗೆ ಅಭಿಷೇಕ, ಪೂಜೆ ಭಜನೆ ನಂತರ ಪ್ರಸಾದ ವಿತರಣೆ ಮಾಡಲಾಯಿತು.
ಅಯ್ಯಪ್ಪ ಮಾಲೆ ನಿರತ ಗುರು ಸ್ವಾಮಿ ಮಹೇಶ ಮಂದಿ, ಕನ್ಯಾ ಸ್ವಾಮಿ ನಾಗರಾಜ ಡೊಂಗರಗಿ, ಸಂತೋಷ ಡೊಂಗರಗಿ, ಸುನೀಲ ಪ್ರಭು, ವಿನೋದ ಶರಣ್, ಸುನೀಲ, ವೀರೇಶ ಶರಣ್, ಅನೀಲ ಬಶೆಟ್ಟಿ, ವಿಜಯಕುಮಾರ, ಜಗದೀಶ ಹಜಪನೂರ, ರೇವಣಸಿದ್ದ ಬಶೆಟ್ಟಿ, ರೇವಣಸಿದ್ದ ಬೋವಿ, ಸಂಜು ನಾಮದಿ, ಚನ್ನವೀರ ನಾಟೀಕಾರ ಮಾಲಾಧಾರಿಗಳಾಗಿದ್ದಾರೆ.
ಮಂಗಳವಾರ ಪ್ರಯಾಣಿ ಬೆಳೆಸಿದ ಮಾಲಾಧಾರಿಗಳು ಶಬರಿ ಮಲೆ ಸನ್ನಿಧಾನದಲ್ಲಿ ಡಿ.22 ರಂದು ಇರುಮುಡಿ ಸಲ್ಲಿಸಲಿದ್ದಾರೆ ಎಂದು ಮುಖಂಡ ನಿತೀನ ಚೇಂಗಟಾ ತಿಳಿಸಿದರು.
ಬಸವರಾಜ ಹಾಜಪನೋರ, ಸೋಮಶೇಖರ ಹೂಗರ, ಮಲ್ಲಯ್ಯ ಮಠಪತಿ, ಸಂತೋಶ ಶರಣ್, ಆನಂದ ಕಾಬಾ, ಶರಣು ಕೇರಜಿ ಚನ್ನು ಹೂಗಾರ ಮತ್ತಿತರರ ಪೂಜೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.