ADVERTISEMENT

ಬುದ್ಧ, ಬಸವ, ಅಂಬೇಡ್ಕರ್‌ ತತ್ವಗಳು ಪ್ರೇರಣೆಯಾಗಲಿ: ನಟ ಚೇತನ್ ಅಹಿಂಸಾ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 6:06 IST
Last Updated 14 ಜುಲೈ 2024, 6:06 IST
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಚಿತ್ರನಟ ಚೇತನ್‌, ಶಾಸಕ ಅಲ್ಲಮಪ್ರಭು ಪಾಟೀಲ, ಪ್ರಾಂಶುಪಾಲರಾದ ಸವಿತಾ ತಿವಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಚಿತ್ರನಟ ಚೇತನ್‌, ಶಾಸಕ ಅಲ್ಲಮಪ್ರಭು ಪಾಟೀಲ, ಪ್ರಾಂಶುಪಾಲರಾದ ಸವಿತಾ ತಿವಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು   

ಕಲಬುರಗಿ: ‘ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಗಳು ಮೂಲ ಪ್ರೇರಣೆಯಾಗಬೇಕು’ ಎಂದು ಚಲನಚಿತ್ರ ನಟ ಚೇತನಕುಮಾರ ಅಹಿಂಸಾ ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಡಾ.ಅಂಬೇಡ್ಕರ್ ಸ್ಮರಣಾರ್ಥ 2023–24ನೇ ಶೈಕ್ಷಣಿಕ ಸಾಲಿನ ಎನ್‌ಎಸ್‌ಎಸ್, ಎನ್.ಸಿ.ಸಿ, ರೇಂಜರ್ಸ್ ಮತ್ತು ರೋವರ್ಸ್‌ ಘಟಕಗಳು, ರೆಡ್‌ಕ್ರಾಸ್, ರೆಡ್‌ರಿಬ್ಬನ್‌ ಕ್ಲಬ್‌ನ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸು ಕಾಣಬೇಕು’ ಎಂದರು. ಬಳಿಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ, ಬಲಭೀಮ ಸಾಂಗ್ಲಿ ಅವರು ಬರೆದ ‘ಇಂಡಿಯನ್ ಇಂಗ್ಲಿಷ್ ಶಾರ್ಟ್‌ ಸ್ಟೋರಿ 1975–2000 ಎ ಕ್ರಿಟಿಕಲ್ ಸರ್ವೆ’ ಪುಸ್ತಕವನ್ನು ಬಿಡುಗಡೆ ಮಾಡಿದರು. ‘ವಿದ್ಯಾರ್ಥಿಗಳು ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಳ್ಳಬೇಕು‘ ಎಂದು ಹೇಳಿದರು.

ADVERTISEMENT

ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ವಿದ್ಯಾರ್ಥಿಗಳನ್ನು ರಂಜಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸವಿತಾ ತಿವಾರಿ ವಹಿಸಿದ್ದರು. ಟಿ.ವಿ. ಅಡಿವೇಶ, ಮಲ್ಲೇಶಪ್ಪ ಎಸ್. ಕುಂಬಾರ, ವಿಜಯಕುಮಾರ ಸಾಲಿಮನಿ, ರಾಜಕುಮಾರ ಸಲಗರ, ವಿನೋದಕುಮಾರ ರಾಠೋಡ, ರಾಜಶೇಖರ ಮಡಿವಾಳ, ವಿಜಯಾನಂದ ವಿಠ್ಠಲರಾವ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.