ADVERTISEMENT

ಬ್ಯಾಸ್ಕೆಟ್‌ಬಾಲ್‌ ಟೂರ್ನಿ | ಬೆಂಗಳೂರು ಉತ್ತರ ತಂಡಗಳು ಚಾಂಪಿಯನ್‌

ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕ–ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ಟೂರ್ನಿ

ಮಲ್ಲಪ್ಪ ಪಾರೇಗಾಂವ
Published 23 ಅಕ್ಟೋಬರ್ 2024, 0:23 IST
Last Updated 23 ಅಕ್ಟೋಬರ್ 2024, 0:23 IST
ಕಲಬುರಗಿ‌ಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪದವಿ ಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡ ಬೆಂಗಳೂರು ಉತ್ತರ ತಂಡದ ಆಟಗಾರರು
ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿ‌ಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪದವಿ ಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡ ಬೆಂಗಳೂರು ಉತ್ತರ ತಂಡದ ಆಟಗಾರರು ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ:  ಬೆಂಗಳೂರು ಉತ್ತರ ಬಾಲಕ–ಬಾಲಕಿಯರ ತಂಡಗಳು  ಮಂಗಳವಾರ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದವು.

ಇಲ್ಲಿನ ಚಂದ್ರಶೇಖರ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡವು, ಮೈಸೂರು ತಂಡವನ್ನು 61–39ರಿಂದ ಸೋಲಿಸಿತು. ಮೈಸೂರು ತಂಡವು ರನ್ನರ್‌ ಅಪ್‌ ಆಯಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಬೆಂಗಳೂರು ಉತ್ತರ ತಂಡವು, ಮೈಸೂರು ತಂಡದ ವಿರುದ್ಧ ಕೊನೆಯವರೆಗೂ ಮುನ್ನಡೆ ಉಳಿಸಿಕೊಂಡಿತು. ಬೆಂಗಳೂರು ಉತ್ತರ ತಂಡದ ಸಮರ್ಥ 11 ಹಾಗೂ ರೋಹಿತ್‌ 9 ಪಾಯಿಂಟ್‌ ಗಳಿಸುವ ಮೂಲಕ ಗೆಲುವಿನ ರೂವಾರಿಯಾದರು.

ADVERTISEMENT

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು ಉತ್ತರ ತಂಡವು, ಬೆಂಗಳೂರು ದಕ್ಷಿಣ ತಂಡವನ್ನು 43–25ರಿಂದ ಪರಾಭವಗೊಳಿಸುವ ಮೂಲಕ ಪ್ರಶಸ್ತಿ ಎತ್ತಿ ಹಿಡಿಯಿತು. 

ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರು ಉತ್ತರ ತಂಡಗಳು, ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆಯಾದವು.

ಕಲಬುರಗಿ‌ಯ ಚಂದ್ರಶೇಖರ ಪಾಟೀಲ ಕ್ರಿಡಾಂಗಣದಲ್ಲಿ ಮಂಗಳವಾರ ಪದವಿ ಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡ ಬೆಂಗಳೂರು ಉತ್ತರ ತಂಡದ ಆಟಗಾರ್ತಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.