ADVERTISEMENT

ಪ್ರಿಯಾಂಕ್ ಆಪ್ತ ಕಾರ್ಯದರ್ಶಿ ವಿರುದ್ಧ ದೋಷಾರೋಪ ಪ್ರಸ್ತಾವನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:41 IST
Last Updated 26 ಜೂನ್ 2024, 15:41 IST

ಕಲಬುರಗಿ: ಕಂದಾಯ ಇಲಾಖೆಯಲ್ಲಿನ ಇಬ್ಬರು ನೌಕರರಿಗೆ ನಿಯಮಬಾಹಿರವಾಗಿ ಪದೋನ್ನತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಇಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿಗಳ (ಎಡಿಸಿ) ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪ್ರಸ್ತಾವ ಸಲ್ಲಿಸುವಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗೆ ಆದೇಶಿಸಿದೆ.

ಈ ಹಿಂದೆ ಎಡಿಸಿಯಾಗಿದ್ದ ಹಾಗೂ ಪ್ರಸ್ತುತ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿಯಾಗಿರುವ ಭೀಮಾಶಂಕರ ತೆಗ್ಗಳ್ಳಿ ಹಾಗೂ ಇವರಿಗಿಂತ ಮೊದಲು ಎಡಿಸಿಯಾಗಿದ್ದ ಶಂಕರಪ್ಪ ವಣಿಕ್ಯಾಳ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಎಚ್‌.ಎಂ. ಸುದರ್ಶನ ಸೂಚಿಸಿದ್ದಾರೆ.

‘ಸಿ’ ದರ್ಜೆ ನೌಕರ ಮತ್ತು ವಿಷಯ ನಿರ್ವಾಹಕರಿಗೆ ನಿಯಮಬಾಹಿರವಾಗಿ ಪದೋನ್ನತಿ ನೀಡಿದ ಪ್ರಕರಣದಲ್ಲಿ ಶಿಸ್ತು ಕ್ರಮದ ದೋಷಾರೋಪಣ ಪಟ್ಟಿಯನ್ನು ಈ ಇಬ್ಬರು ಅಧಿಕಾರಿಗಳು ಸಲ್ಲಿಸಿರಲಿಲ್ಲ. ಹೀಗಾಗಿ ಈ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಸರ್ಕಾರ ಮುಂದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.