ಕಲಬುರಗಿ: ‘ರಾಜ್ಯದಲ್ಲಿ ಜುಲೈ 1 ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಸಂಭವಿಸಿದ 30 ದಿನದೊಳಗಾಗಿ ನೋಂದಣಿ ಮಾಡಿ ಪ್ರಮಾಣಪತ್ರ ವಿತರಣೆ ಮಾಡುವ ಅಧಿಕಾರವನ್ನು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ನೀಡಿ ಜನನ ಮರಣ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ’ ಎಂದು ಕಲಬುರಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಜನನ ಮರಣ ಸಂಭವಿಸಿದ ಮೊದಲ 21 ದಿನಗಳ ಒಳಗಾಗಿ ನೋಂದಣಿ ಮಾಡಿಸಿ ಉಚಿತವಾಗಿ ಪ್ರಮಾಣ ಪತ್ರ ಪಡೆಯಬಹುದು. 21 ದಿನಗಳಿಂದ 30 ದಿನಗಳ ನಡುವೆ ನೋಂದಣಿ ಮಾಡಿಸಿದರೆ ₹2 ವಿಳಂಬ ಶುಲ್ಕ ನೀಡಬೇಕು’ ಎಂದು ತಿಳಿಸಿದ್ದಾರೆ.
‘ಲೋಕಾಯುಕ್ತ ಹೆಸರಲ್ಲಿ ಹೆದರಿಸಿದರೆ ದೂರು ನೀಡಿ’
ಕಲಬುರಗಿ: ಅಪರಿಚಿತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ, ನೌಕರರ ಹೆಸರು ಮೊಬೈಲ್ ಸಂಖ್ಯೆ ತಿಳಿದುಕೊಂಡು, ಮೊಬೈಲ್ ಸಂಖ್ಯೆ 9156540734 ಹಾಗೂ ಇತರೆ ನಂಬರಗಳಿಂದ ಕರೆ ಮಾಡಿ ತಾನು ಲೋಕಾಯುಕ್ತ ಎಂದು ಬಿಂಬಿಸಿಕೊಂಡು ನಿಮ್ಮ ವಿರುದ್ಧ ದೂರು ಇದೆ ಎಂದು ತಿಳಿಸಿ, ತನ್ನನ್ನು ಕಾಣುವಂತೆ ಅಲ್ಲದೇ ಗೂಗಲ್ ಪೇ ಅಥವಾ ಪೋನ್ ಪೇ ಅಥವಾ ಅಕೌಂಟ್ ನಂಬರಿಗೆ ಹಣ ಹಾಕಲು ಬೆದರಿಕೆ ಹಾಕಿದರೆ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ. ಈ ಕುರಿತು ಕರ್ನಾಟಕ ಲೋಕಾಯುಕ್ತ ಕಲಬುರಗಿ ಮೊಬೈಲ್ ನಂಖ್ಯೆ 9364062519, ದೂರವಾಣಿ ಸಂಖ್ಯೆ 08472–295364ಗೆ ಮಾಹಿತಿ ನೀಡಬೇಕು‘ ಎಂದು ಕಲಬುರಗಿ ಲೋಕಾಯುಕ್ತ ಎಸ್‌ಪಿ ಆ್ಯಂಟನಿ ಜಾನ್ ಜೆ.ಕೆ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.