ADVERTISEMENT

ಅಮರನಾಥ ಪರ ಬಿಜೆಪಿ–ಜೆಡಿಎಸ್ ಒಗ್ಗಟ್ಟು ಪ್ರದರ್ಶನ

ಬಿಜೆಪಿ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತ ನೀಡಲು ಎರಡೂ ಪಕ್ಷಗಳ ಮುಖಂಡರ ಮನವಿ

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:33 IST
Last Updated 16 ಮೇ 2024, 15:33 IST
<div class="paragraphs"><p>ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಶಿವರಾಜ ಪಾಟೀಲ ರದ್ದೇವಾಡಗಿ, ಶಾಸಕ ಅವಿನಾಶ್‌ ಜಾಧವ್‌, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಅಭ್ಯರ್ಥಿ ಅಮರನಾಥ ಪಾಟೀಲ, ಬಾಲರಾಜ ಗುತ್ತೇದಾರ, ಚಂದು ಪಾಟೀಲ, ಸುನೀಲ ವಲ್ಯಾಪುರೆ, ಸುಭಾಷ್ ಗುತ್ತೇದಾರ ಅವರು ಕರಪತ್ರವನ್ನು ಬಿಡುಗಡೆ ಮಾಡಿದರು&nbsp;&nbsp;</p></div>

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಶಿವರಾಜ ಪಾಟೀಲ ರದ್ದೇವಾಡಗಿ, ಶಾಸಕ ಅವಿನಾಶ್‌ ಜಾಧವ್‌, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಅಭ್ಯರ್ಥಿ ಅಮರನಾಥ ಪಾಟೀಲ, ಬಾಲರಾಜ ಗುತ್ತೇದಾರ, ಚಂದು ಪಾಟೀಲ, ಸುನೀಲ ವಲ್ಯಾಪುರೆ, ಸುಭಾಷ್ ಗುತ್ತೇದಾರ ಅವರು ಕರಪತ್ರವನ್ನು ಬಿಡುಗಡೆ ಮಾಡಿದರು  

   

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಅಮರನಾಥ ಪಾಟೀಲ ಪರವಾಗಿ ಮೈತ್ರಿ ಪಕ್ಷಗಳಾದ ಬಿಜೆಪಿ–ಜೆಡಿಎಸ್ ಒಟ್ಟಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಿದವು. 

ವಿಧಾನಪರಿಷತ್ ಉಪನಾಯಕ ಸುನೀಲ ವಲ್ಯಾ‍ಪುರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬೀದರ್ ಮುಖಂಡರಾದ ಸೋಮನಾಥ ಪಾಟೀಲ, ಈಶ್ವರ ಸಿಂಗ್ ಠಾಕೂರ್ ಸೇರಿದಂತೆ ಹಲವರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಮುಖಂಡರು ಜೊತೆಯಾದರು.

ADVERTISEMENT

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ ಗುತ್ತೇದಾರ, ಪಕ್ಷದ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾ ರೆಡ್ಡಿ, ಮುಖಂಡ ಸಂಜೀವನ ಯಾಕಾಪುರ ಸೇರಿದಂತೆ ಹಲವು ಜೆಡಿಎಸ್ ಮುಖಂಡರನ್ನು ವೇದಿಕೆಯ ಮೇಲೆ ಆಹ್ವಾನಿಸಲಾಯಿತು. ಬಿಜೆಪಿ ಮುಖಂಡರಿಗೆ ಜೆಡಿಎಸ್ ಶಲ್ಯ, ಜೆಡಿಎಸ್ ಮುಖಂಡರಿಗೆ ಬಿಜೆಪಿಯ ಶಲ್ಯಗಳನ್ನು ಹಾಕಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎನ್. ರವಿಕುಮಾರ್, ‘ಕಲಬುರಗಿ ಸಂಸ್ಕೃತಿಯನ್ನು ಹಾಳು ಮಾಡಿದ ಪ್ರಿಯಾಂಕ್ ಖರ್ಗೆ ಆಡಳಿತದ ವಿರುದ್ಧ ಪರವೀಧರರು ಅಮರನಾಥ ಪಾಟೀಲ ಅವರಿಗೆ ಮೊದಲ ಪ್ರಾಶಸ್ತದ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಕಲಬುರಗಿ ಜಿಲ್ಲೆಯು ಮೊದಲಿನಿಂದ ಶಾಂತಿಗೆ ಹೆಸರಾದುದು. ಆದರೆ, ಇಂದು ಏನಾಗುತ್ತಿದೆ? ನಿತ್ಯ ಮಾಧ್ಯಗಳಲ್ಲಿ ಒಂದಿಲ್ ಕ್ರೋರ ಘಟನೆಗಳನ್ನು ಕಾಣುತ್ತಿದ್ದೇವೆ. ಒಬ್ಬ ವ್ಯಾಪಾರಿಯನ್ನು ಕೂಡಿ ಹಾಕಿ ಮರ್ಮಾಂಗಕ್ಕೆ ಶಾಕ್ ನೀಡುವ ಮೂಲಕ ವಿಕೃತಿ ಮೆರೆಯುತ್ತಾರೆ ಎಂದರೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದು ವಿದ್ಯಾವಂತರು ತಿಳಿದುಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದು ಹೋಗಿದೆ. ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾಗಿತ್ತು. ಅದು ಮನಸ್ಸಿನ ಚಿತ್ರಣದಿಂದ ಮರೆಯಾಗುವ ಮುನ್ನವೇ ಇದೀಗ ಮತ್ತೊಮ್ಮೆ ಅಂತಹುದೇ ಘಟನೆ ನಡೆದಿದೆ. ಇಂದು ನಡೆಯುತ್ತಿರುವ ದುಷ್ಕೃತ್ಯಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣ’ ಎಂದು ಹರಿಹಾಯ್ದರು.

‘ಸರ್ಕಾರ ಗ್ಯಾರಂಟಿ ಎಂದು ಹೇಳಿ ಅಭಿವೃದ್ಧಿ ಕಾರ್ಯ ನಿಲ್ಲಿಸಿದೆ. ಇದೀಗ ಸರ್ಕಾರಿ ನೌಕರರಿಗೆ ಹೆಚ್ಚುವರಿ ಶೇ 10 ವೇತನ ಹೆಚ್ಚಳ ಮಾಡಲು ₹ 10,500 ಕೋಟಿ ಬೇಕು. ಅಷ್ಟು ಹಣ ಖಜಾನೆಯಲ್ಲಿ ಇಲ್ಲ. ಮುಂದೆ ನೌಕರರ ಸಂಬಳ ಆಗುವುದು ಕೂಡ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಸರ್ಕಾರದಲ್ಲಿ ಶಿಕ್ಷಣ ಇಲಾಖೆಯಂತರ ಮಹತ್ವದ ಸ್ಥಾನವನ್ನು ಮಧು ಬಂಗಾರಪ್ಪ ಅವರಿಗೆ ನೀಡಿದವರಿಗೆ ಬುದ್ದಿ ಇಲ್ಲ. ನನಗೆ ಕನ್ನಡ ಓದಲು, ಬರೆಯಲು ಬರಲ್ಲ ಎಂದು ಘಂಟಾಘೋಷವಾಗಿ ಹೇಳುವವರು ನಮ್ಮ ಸಚಿವರಾಗಿದ್ದಾರೆ. ಅವರಿಗೂ ಬುದ್ದಿ ಇಲ್ಲ, ಅವರಿಗೆ ಸ್ಥಾನ ನೀಡಿದವರಿಗೂ ಬುದ್ದಿ ಇಲ್ಲ’ ಎಂದು ಟೀಕಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ‘ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲುವುದು ಖಾತ್ರಿಯಾಗಿದ್ದು, ಅದರಲ್ಲಿ ಕಲಬುರಗಿ ಅಭ್ಯರ್ಥಿಯೂ ಗೆಲ್ಲಲಿದ್ದಾರೆ. ಇದೀಗ ಕಳೆದುಕೊಂಡಿದ್ದ ಪರಿಷತ್ ಸದಸ್ಯ ಸ್ಥಾನವನ್ನು ಅಮರನಾಥ ಅವರನ್ನು ಗೆಲ್ಲಿಸುವ ಮೂಲಕ ಗಳಿಸಿಕೊಳ್ಳಬೇಕಾಗಿದೆ’ ಎಂದರು.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಬೀದರ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್‌ರೆಡ್ಡಿ ಯಾಳಗಿ, ಬಳ್ಳಾರಿಯ ಮಹೇಶ್ವರಸ್ವಾಮಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿದರು.

ಶಾಸಕ ಡಾ.ಅವಿನಾಶ ಜಾಧವ, ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ, ಉಪ ಮೇಯರ್ ಶಿವಾನಂದ ಪಿಸ್ತಿ, ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ಶೋಭಾ ಬಾಣಿ, ದಿಲೀಪ ಪಾಟೀಲ, ವಿದ್ಯಾಧರ ಮಂಗಳೂರೆ, ಸೋಮನಾಥ ಪಾಟೀಲ, ಗಿರಿರಾಜ ಯಳಮೇಲಿ, ಶರಣಪ್ಪ ತಳವಾರ, ಸಂತೋಷ ಹಾದಿಮನಿ, ನಾಗರಾಜ ಮಹಾಂಗಾವ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ಕಳೆದ ಬಾರಿ ಪದವೀಧರರು ಸದನಕ್ಕೆ ಕಳುಹಿಸಿದಾಗ ಈ ಭಾಗದ ಪದವೀಧರರ ಸಮಸ್ಯೆಗಳನ್ನು ತೆರೆದಿಟ್ಟಿದ್ದೆ. ಈ ಬಾರಿಯೂ ಕೂಡ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವೆ

-ಅಮರನಾಥ ಪಾಟೀಲ ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.