ADVERTISEMENT

ದಸರಾ ನವರಾತ್ರಿ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಸುಗೂರ ವೆಂಕಟೇಶ್ವರಸ್ವಾಮಿ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:08 IST
Last Updated 15 ಅಕ್ಟೋಬರ್ 2024, 14:08 IST
ಕಾಳಗಿ ತಾಲ್ಲೂಕಿನ ಸುಗೂರ ಗ್ರಾಮದಲ್ಲಿ ನವರಾತ್ರಿ ಬ್ರಹ್ಮೋತ್ಸವದ ಕೊನೆಯ ದಿನ ಮಂಗಳವಾರ ಚಕ್ರಸ್ನಾನ ಜರುಗಿತು
ಕಾಳಗಿ ತಾಲ್ಲೂಕಿನ ಸುಗೂರ ಗ್ರಾಮದಲ್ಲಿ ನವರಾತ್ರಿ ಬ್ರಹ್ಮೋತ್ಸವದ ಕೊನೆಯ ದಿನ ಮಂಗಳವಾರ ಚಕ್ರಸ್ನಾನ ಜರುಗಿತು   

ಕಾಳಗಿ: ತಾಲ್ಲೂಕಿನ ಸುಗೂರ ಗ್ರಾಮದ ತಿರುಮಲ ತಿರುಪತಿ ಹಾಥೀರಾಮಜಿ ಮಠದ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ನವರಾತ್ರಿ ಬ್ರಹ್ಮೋತ್ಸವ ಮಂಗಳವಾರ ಸಂಭ್ರಮದ ತೆರೆ ಕಂಡಿತು.

ಬೆಳಿಗ್ಗೆ ವೆಂಕಟೇಶ್ವರಸ್ವಾಮಿ ಮೂರ್ತಿಗೆ ಮಹಾಭಿಷೇಕ ಪೂಜೆ, ಹೋಮ, ಹವನ ಪೂಜೆ, ತುಳಸಿ ಅರ್ಚನೆ ಸಲ್ಲಿಸಲಾಯಿತು. ಪಲ್ಲಕ್ಕಿಯಲ್ಲಿ ದೇವತಾ ಚಕ್ರ ಪ್ರತಿಷ್ಠಾಪಿಸಿ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು.

ಹನುಮಾನ ಮಂದಿರ ಬಳಿಯ ಪುಷ್ಕರಣಿಗೆ ಉತ್ಸವ ತಲುಪಿ, ತಿರುಪತಿ ಹಾಥೀರಾಮಜಿ ಮಠದ ಮಹಾಂತ ಓಂಪ್ರಕಾಶದಾಸ ಮಹಾರಾಜ, ವೇಣುಗೋಪಾಲ ದೇವಸ್ಥಾನದ ಕೃಷ್ಣದಾಸ ಮಹಾರಾಜ ಹಾಗೂ ದೇವಸ್ಥಾನದ ಸಂಚಾಲಕ ಸನ್ನತದಾಸ ಮಹಾರಾಜ, ಮಹಾಕಾಲದಾಸ ಮಹಾರಾಜ ಮತ್ತಿತರ ಭಕ್ತರು ನೀರಿಗೆ ಇಳಿದು ಪೂಜೆ ಸಲ್ಲಿಸಿದರು. ಬಳಿಕ ಎಲ್ಲರೂ ಸ್ನಾನ ಮಾಡಿ ದೇವಸ್ಥಾನಕ್ಕೆ ಹಿಂದಿರುಗಿ ಬ್ರಹ್ಮೋತ್ಸವ ಸಂಭ್ರಮದಿಂದ ಸಂಪನ್ನಗೊಳಿಸಿದರು.

ADVERTISEMENT

ಸಿದ್ದುಕೇಶ್ವರ, ದತ್ತಾತ್ರೇಯ ಮುಚೆಟ್ಟಿ, ಶರಣು ಹಡಪದ, ಸಂತೋಷ ಸಿಂಧೆ, ಬಸವರಾಜ ಕಣ್ಣಿ, ನಾರಾಯಣ ಹಡಪದ, ಪ್ರಭಾಕರ ಮುಚ್ಚೆಟ್ಟಿ, ಖತಲಯ್ಯ ಗುತ್ತೇದಾರ, ಖೇಮು ರಾಠೋಡ ಅನೇಕರು ಹಾಜರಿದ್ದರು.

ಕಾಳಗಿ ತಾಲ್ಲೂಕಿನ ಸುಗೂರ ಗ್ರಾಮದಲ್ಲಿ ನವರಾತ್ರಿ ಬ್ರಹ್ಮೋತ್ಸವದ ಕೊನೆಯ ದಿನ ಮಂಗಳವಾರ ಚಕ್ರಸ್ನಾನ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.