ಕಲಬುರಗಿ: ‘ಬುರ್ಖಾ ಧರಿಸದಿದ್ದರೆ ಬಸ್ ಹತ್ತಲು ಬಿಡುವುದಿಲ್ಲ’ ಎಂದು ಮುಸ್ಲಿಂ ವಿದ್ಯಾರ್ಥಿನಿಗೆ ತಾಕೀತು ಮಾಡಿದ್ದ ಬಸವ ಕಲ್ಯಾಣ ಡಿಪೊದ ಬಸ್ ಚಾಲಕ ಮಹಿಬೂಬ್ ಪಟೇಲ್ ಎಂಬವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್. ಫುಲೇಕರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಊರಿಗೆ ತೆರಳಲು ಬಸ್ ಹತ್ತಲು ಮುಂದಾಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದಳು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಹಿಬೂಬ್ ಪಟೇಲ್, ‘ಬುರ್ಖಾ ಏಕೆ ಹಾಕಿಕೊಂಡಿಲ್ಲ’ ಎಂದು ಗದರಿದ್ದಲ್ಲದೇ ವಿದ್ಯಾರ್ಥಿನಿಯನ್ನು ಬಸ್‌ನಿಂದ ಹೊರಗೆ ಎಳೆದಿದ್ದರು. ಈ ಕುರಿತು ಕಮಲಾಪುರದ ಸರ್ಕಾರಿ ಕನ್ಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಂಬಾದಾಸ ಜಮಾದಾರ ಅವರು ಪೊಲೀಸರಿಗೆ ಚಾಲಕ ಪಟೇಲ್ ವಿರುದ್ಧ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಘಟನೆ ಬೆನ್ನಲ್ಲೇ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
‘ಬುರ್ಖಾ ಧರಿಸದಿದ್ದರೆ ಬಸ್ ಹತ್ತಲು ಬಿಡುವುದಿಲ್ಲ’ ಎಂಬ ಶೀರ್ಷಿಕೆಯಡಿ ಬುಧವಾರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.