ಚಿಂಚೋಳಿ: ರೈತರ ಮನೆಯ ಮುಂದೆ ಕಟ್ಟಿದ್ದ ಹಸು ಬಿಚ್ಚಿಕೊಂಡು ವಾಹನದಲ್ಲಿ ತುಂಬಿಕೊಂಡು ಹೋಗುವಾಗ ಹಸುವಿನ ಮಾಲೀಕ ಮತ್ತು ಪೊಲೀಸರು ಕಳ್ಳರ ಬೆನ್ನಟ್ಟಿದಾಗ ಕಳ್ಳರು ವಾಹನ ದಾರಿ ಮಧ್ಯೆ ಬಿಟ್ಟು ಪರಾರಿಯಾದ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ.
ಚಿಮ್ಮನಚೋಡ ಗ್ರಾಮದ ಮಾರುತಿ ಎಂಬುವವರು ತಮ್ಮ ಮನೆಯ ಮುಂದೆ ಕಟ್ಟಿದ್ದ ಹಸುವನ್ನು ಬಿಟ್ಟಿಕೊಂಡು ಬೊಲೆರೋ ಪಿಕ್ ಅಪ್ ವಾಹನದಲ್ಲಿ ತುಂಬಿಕೊಂಡು ಹೋಗುವಾಗ ರೈತ ವಾಹನದ ಬೆನ್ನಟ್ಟಿದ್ದಾರೆ. ಜತೆಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಭಾಲ್ಕಿ–ಚಿಂಚೋಳಿ ರಾಜ್ಯ ಹೆದ್ದಾರಿ 75ರಲ್ಲಿ ಗಾರಂಪಳ್ಳಿ ಹೂಡದಳ್ಳಿ ಮಧ್ಯೆದ ರಸ್ತೆಯಲ್ಲಿನ ಗುಂಡಿಯಲ್ಲಿ ವಾಹನ ಇಳಿದ ಪರಿಣಾಮ ಫಾಟಾ ಕಟ್ ಆಗಿದೆ. ಹೆದ್ದಾರಿಯಲ್ಲಿ ನಿಂತಿದ್ದು ಕಳ್ಳರು ಪರಾರಿಯಾಗಿದ್ದಾರೆ.
ರಾಜಾಸ್ತಾನ ನೋಂದಣಿ ಹೊಂದಿರುವ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಮಾರುತಿಯವರ ಹಸು ಅಲ್ಲದೇ ಇತರೆ ರೈತರ 4 ಹಸುಗಳು ಇದ್ದವು.
ಚಿಂಚೋಳಿ ಪಿಎಸ್‌ಐ ರಾಚಯ್ಯ ಮಠಪತಿ, ಹಣಮಂತ ಭಂಕಲಗಿ ಭೇಟಿ ನೀಡಿ ಪಂಚನಾಮೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ಮತ್ತು 4 ಜಾನುವಾರು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದಲ್ಲಿ ಕಲ್ಲು, ಗುಂಡುಗಳ ಮೂಟೆ ಮತ್ತು ಮತ್ತಿತರ ಮಾರಾಕಸ್ತ್ರಗಳು ಇದ್ದವು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.