ADVERTISEMENT

ದನಗಳ್ಳತನ: ನಾಲ್ವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:06 IST
Last Updated 28 ಅಕ್ಟೋಬರ್ 2024, 4:06 IST
ಶಹಾಬಾದ್‌ ಮತ್ತು ಕಾಳಗಿ ಠಾಣೆಗಳ ವ್ಯಾಪ್ತಿಯ ಜಾನುವಾರು ಕಳವು ಆರೋಪಿಗಳಿಂದ ವಶಕ್ಕೆ ಪಡೆಯಲಾದ ನಗದು ಮತ್ತು ವಾಹನ. ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ಚಂದ್ರಕಾಂತ ಮೆಕಾಲೆ, ತಿಮ್ಮಯ್ಯ, ಶ್ರೀನಿವಾಸ ರೆಡ್ಡಿ, ಸಿಬ್ಬಂದಿ ಉಪಸ್ಥಿತರಿದ್ದರು
ಶಹಾಬಾದ್‌ ಮತ್ತು ಕಾಳಗಿ ಠಾಣೆಗಳ ವ್ಯಾಪ್ತಿಯ ಜಾನುವಾರು ಕಳವು ಆರೋಪಿಗಳಿಂದ ವಶಕ್ಕೆ ಪಡೆಯಲಾದ ನಗದು ಮತ್ತು ವಾಹನ. ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ಚಂದ್ರಕಾಂತ ಮೆಕಾಲೆ, ತಿಮ್ಮಯ್ಯ, ಶ್ರೀನಿವಾಸ ರೆಡ್ಡಿ, ಸಿಬ್ಬಂದಿ ಉಪಸ್ಥಿತರಿದ್ದರು   

ಶಹಾಬಾದ್: ದನಗಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಕಾಳಗಿ ಪೊಲೀಸ್ ಠಾಣೆ ಪ್ರದೇಶದ ಕಳ್ಳತ ಪ್ರಕರಣದಲ್ಲಿ ಕಾಳಗಿ ನಿವಾಸಿಗಳಾದ ಜೀಲಾನಿ ಚಿತ್ತಾವಲಿ, ಶ್ರೀಮಂತ ಅಂಬೋಜಿ ಹಾಗೂ ಸೈಯದ್ ನಯೂಮ್ ಬಂಧಿತ ಆರೋಪಿಗಳು. ₹30 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಶಹಾಬಾದ್ ನಿವಾಸಿ ಮಹಮದ್ ಅಖಲಾಕ್‌ನನ್ನು ಬಂಧಿಸಿ, ₹30 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ₹1 ಲಕ್ಷ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ. ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಶಹಾಬಾದ್‌ನ ಬಸಯ್ಯ ಮಠ, ಈಶ್ವರ ಪೂಜಾರಿ ಅವರಿಗೆ ಸೇರಿದ್ದ ಒಂದು ಆಕಳು, ಹೋರಿ ಕರು ಸೇರಿ ₹50 ಸಾವಿರ ಮೌಲ್ಯದ ಜಾನುವಾರುಗಳನ್ನು ಕಳ್ಳತನ ಮಾಡಿದ್ದ ಅಖಲಾಕ್, ಅವುಗಳನ್ನು ಮಾರಾಟ ಮಾಡಿದ್ದನ್ನು. ಕಾಳಗಿಯ ಕಾಶಿನಾಥ ಹೊಸಮನಿ ಮತ್ತು ವೀರಭದ್ರಪ್ಪ ಸಲಗರ ಅವರಿಗೆ ಸೇರಿದ್ದ ಎರಡು ಆಕಳುಗಳನ್ನು ಕದ್ದೊಯ್ದ ಜೀಲಾನಿ, ಶ್ರೀಮಂತ ಹಾಗೂ ಸೈಯದ್, ಅವುಗಳನ್ನು ಮಾರಾಟ ಮಾಡಿದ್ದರು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.