ADVERTISEMENT

ಅಪ್ಪ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2024, 9:06 IST
Last Updated 14 ಮೇ 2024, 9:06 IST
ಶ್ರಾವಣಿ ವಿ.ಪಾಟೀಲ (ಶೇ 97.2)
ಶ್ರಾವಣಿ ವಿ.ಪಾಟೀಲ (ಶೇ 97.2)   

ಕಲಬುರಗಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಅಪ್ಪ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಅಪ್ಪ ಪಬ್ಲಿಕ್ ಶಾಲೆಯ 10ನೇ ತರಗತಿಗೆ ಶೇ 98.3ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 307 ವಿದ್ಯಾರ್ಥಿಗಳಲ್ಲಿ 302 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶ್ರಾವಣಿ ಪಾಟೀಲ ಶೇ 97.6ರಷ್ಟು ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದಾರೆ. ವೀರ್ ರಟ್ಕಲ್ ಶೇ 95.2ರಷ್ಟು ಹಾಗೂ ಜಿ. ಸ್ಪೂರ್ತಿ ರೆಡ್ಡಿ ಶೇ 94.2ರಷ್ಟು ಅಂಕ ಗಳಿಸಿದ್ದಾರೆ.

ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ಸ್ಪೂರ್ತಿ, ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಿಸ್ಟಿಂಕ್ಷನ್ 36, ಪ್ರಥಮ ಶ್ರೇಣಿಯಲ್ಲಿ 188, ದ್ವಿತೀಯ ಶ್ರೇಣಿಯಲ್ಲಿ 42 ಹಾಗೂ 40 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ADVERTISEMENT

12ನೇ ತರಗತಿಯಲ್ಲಿ 100 ಪ್ರತಿಶತ ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಕುಳಿತ 19 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಓಂಕಾರ ನಕುಲ್ ಡಿಗ್ಗಿ ಶೇ 84.6ರಷ್ಟು, ಹೊಗಿರಾಳ ಅಭಿಜಿತ್ ಚಂದ್ರ ನೀಲ್ ಶೇ 81.6ರಷ್ಟು ಹಾಗೂ ಮಧುಸೂದನ್ ಶೇ 78.8 ಅಂಕ ಪಡೆದಿದ್ದಾರೆ. 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ ಹಾಗೂ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪ ಅವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ವೀರ್ ಕೇದಾರತ್ ರಟ್ಕಲ್ (ಶೇ 95.2)
ಜಿ.ಸ್ಪೂರ್ತಿ ರೆಡ್ಡಿ (ಶೇ 94.2)
ಶ್ರೀನಿಧಿ ವಿ.ಪಾಟೀಲ (ಶೇ 93.6)
ಸೃಷ್ಟಿ ಮುಧೋಳ್ (ಶೇ 93.2)
ಜೀವಿಕಾ ಆರ್‌. (ಶೇ 93)
ನಿಶಾಂತ್ ಜಿ.ದೊಡ್ಡಮನಿ (ಶೇ 92.8)
ನಿಯತಿ ಜಿ. ದೊಡ್ಡಮನಿ (ಶೇ 92.4)
ಕ್ಷಿತಿ ಪ್ರಸನ್ನ ಪಾಟೀಲ (ಶೇ 92.2)
ವಿಸ್ಮಿತಾ ಅರುಣ್‌ಕುಮಾರ್ (ಶೇ 91.4)
ಪೃಥ್ವಿ ಪಿ.ತಳವಾರ (ಶೇ 91.2)
ಸಿಂಚನಾ ಎಸ್‌. (ಶೇ 91)
ವೈಷ್ಣವಿ ಚಂದ್ರಶೇಖರ್ (ಶೇ 91)
ಅನನ್ಯಾ ಎಂ. (ಶೇ 90.4)
ಸಂಪ್ರೀತ್ ಹನುಮಂತಪ್ಪ (ಶೇ 90)
ವರ್ಷಿಣಿ ಭರತೇಶ್ (ಶೇ 90)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.