ADVERTISEMENT

ವಿಷ ಆಹಾರ ಸೇವನೆ: ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:49 IST
Last Updated 30 ಜೂನ್ 2024, 6:49 IST
<div class="paragraphs"><p><strong>ಜೇವರ್ಗಿ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುರಾರ್ಜಿ ವಸತಿ ಶಾಲೆಯ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಆರೋಗ್ಯವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ವಿಚಾರಿಸಿದರು.</strong></p></div>

ಜೇವರ್ಗಿ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುರಾರ್ಜಿ ವಸತಿ ಶಾಲೆಯ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಆರೋಗ್ಯವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ವಿಚಾರಿಸಿದರು.

   

ಜೇವರ್ಗಿ: ಪಟ್ಟಣದ ಓಂನಗರ ಬಡಾವಣೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಶನಿವಾರ ಬೆಳಿಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಬೆಳಿಗ್ಗೆ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ರೈಸ್‌ಬಾತ್ ಸೇವಿಸಿದ ನಂತರ ವಾಂತಿ, ಹೊಟ್ಟೆ ನೋವು, ತಲೆಸುತ್ತು ಶುರುವಾಯಿತು. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘18 ವಿದ್ಯಾರ್ಥಿನಿಯರ ಪೈಕಿ 7 ವಿದ್ಯಾರ್ಥಿನಿಯರಿಗೆ ವಿಷ ಆಹಾರ ಸೇವನೆಯಿಂದ ಹೊಟ್ಟೆ ನೋವು ಸಮಸ್ಯೆ, ವಾಂತಿ ಆಗಿದೆ’ ಎಂದು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ತಿಳಿಸಿದ್ದಾರೆ.

ADVERTISEMENT

ವಸತಿ ನಿಲಯಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಮಲ್ಲಣ್ಣ ಯಲಗೋಡ ಅವರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು, ‘ಶಾಲೆಯಲ್ಲಿ ಆಹಾರ ಪದಾರ್ಥ ಸ್ವಚ್ಛಗೊಳಿಸದೇ ಹುಳು ತುಂಬಿದ ಆಹಾರವನ್ನೇ ನೀಡಲಾಗುತ್ತಿದೆ. ನಿಗದಿತ ಸಮಯಕ್ಕೆ ಊಟ, ಉಪಾಹಾರ ನೀಡಲ್ಲ. ಅರ್ಧ ಬೆಂದ ಆಹಾರವನ್ನೇ ಸೇವಿಸುವ ಸ್ಥಿತಿಯಿದೆ. ಸಂಪೂರ್ಣ ಕಲುಷಿತ ನೀರನ್ನೆ ಅಡುಗೆಗೆ ಬಳಸಲಾಗುತ್ತಿದೆ. ಹೀಗಾದರೇ ನಾವು ಬದುಕುವುದೇ ಕಷ್ಟ’ ಎಂದು ಅಳಲು ತೋಡಿಕೊಂಡರು.

‘ನಮ್ಮ ಪಾಲಕರು ಇಲ್ಲಿಂದ ಟಿಸಿ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇಲ್ಲಿರುವ ಗುಣಮಟ್ಟದ ಶಿಕ್ಷಣ ನಮ್ಮನ್ನು ಹೋಗಲು ಬಿಡುತ್ತಿಲ್ಲ. ವಸತಿ ನಿಲಯದ ಊಟ, ಉಪಾಹಾರದ ಗುಣಮಟ್ಟ ಸುಧಾರಣೆ ಆಗಬೇಕಾದರೆ ಅಡುಗೆ ಸಿಬ್ಬಂದಿ ಬದಲಾಯಿಸಬೇಕು’ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.

ನಂತರ ತಹಶೀಲ್ದಾರ್‌ ಮಲ್ಲಣ್ಣ ಯಲಗೋಡ ಅವರು ಪ್ರಾಚಾರ್ಯ ಶಿವಪುತ್ರಪ್ಪ ಕಕ್ಕಳಮೇಲಿ ಅವರೊಂದಿಗೆ ಮಾತನಾಡಿ, ‘ಕೂಡಲೇ ಗುಣಮಟ್ಟದ ಆಹಾರ ಹಾಗೂ ನೀರು ಪೂರೈಕೆಯಾಗಬೇಕು. ಇಲ್ಲದಿದ್ದರೆ ಅಡುಗೆ ಸಿಬ್ಬಂದಿ ತೆಗೆದು ಹಾಕಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.