ADVERTISEMENT

ಚಿಂಚೋಳಿ: ತಿಂಗಳಲ್ಲೇ ಕಿತ್ತು ಹೋದ ಡಾಂಬರು

ಜಗನ್ನಾಥ ಡಿ.ಶೇರಿಕಾರ
Published 31 ಜುಲೈ 2024, 6:39 IST
Last Updated 31 ಜುಲೈ 2024, 6:39 IST
<div class="paragraphs"><p>ಚಿಂಚೋಳಿ ತಾಲ್ಲೂಕು ಚಿಮ್ಮಾಈದಲಾಯಿ ಕ್ರಾಸ್ ಸಮೀಪದ ಮುಲ್ಲಾಮಾರಿ ಕಾಲುವೆಯ ಸೇತುವೆಯ ಬಳಿ ಹಾಕಿದ್ದ ಡಾಂಬರು ಕಿತ್ತು ಹೋಗಿ ಹೊಂಡ ನಿರ್ಮಾಣವಾಗಿದೆ</p></div>

ಚಿಂಚೋಳಿ ತಾಲ್ಲೂಕು ಚಿಮ್ಮಾಈದಲಾಯಿ ಕ್ರಾಸ್ ಸಮೀಪದ ಮುಲ್ಲಾಮಾರಿ ಕಾಲುವೆಯ ಸೇತುವೆಯ ಬಳಿ ಹಾಕಿದ್ದ ಡಾಂಬರು ಕಿತ್ತು ಹೋಗಿ ಹೊಂಡ ನಿರ್ಮಾಣವಾಗಿದೆ

   

ಚಿಂಚೋಳಿ: ಪಟ್ಟಣದ ಹೊರವಲಯದ ಸಿದ್ಧಸಿರಿ ಎಥೆನಾಲ್ ಕಂಪನಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆ ನಡೆಸಿದ ರಸ್ತೆ ಕಾಮಗಾರಿ ಹಳ್ಳ ಹಿಡಿದಿದೆ. ಮಳೆಯನ್ನೂ ಲೆಕ್ಕಿಸದೇ ರಸ್ತೆಗೆ ಹಾಕಿದ್ದ ಡಾಂಬರು ಒಂದು ವಾರದೊಳಗೆ ಕಿತ್ತುಹೋಗಿದ್ದು,
ರಸ್ತೆ ಹದಗೆಟ್ಟಿದೆ.

ಹೆದ್ದಾರಿಯ ಅಗಲೀಕರಣ, ಡಾಂಬರೀಕರಣ ಸೇರಿದಂತೆ ಹಲವು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.

ADVERTISEMENT

2023ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಮಗಾರಿ ಆರಂಭಿಸಿ ರಸ್ತೆಯ ಎರಡು ಬದಿಯ ಭುಜವನ್ನು ಅಗೆದು ಮುರುಮ್ ಮತ್ತು ಕಾಂಕ್ರಿಟ್ ಭರ್ತಿ ಮಾಡುವುದರ ಜತೆಗೆ ಕಲವರ್ಟ ಕಾಮಗಾರಿ ನಡೆಸಲಾಗಿತ್ತು. ಆದರೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳದೇ ವರ್ಷದಿಂದ ವಿಳಂಬ ಮಾಡಿದ್ದರು. ಆದರೆ ಮಳೆಗಾಲ ಆರಂಭವಾದ ಮೇಲೆ ಜೂನ್ ತಿಂಗಳಲ್ಲಿ ಡಾಂಬರೀಕರಣ
ನಡೆಸಿದ್ದರು.

ತಳಪಾಯದಲ್ಲಿ ಸರಿಯಲ್ಲಿ ಪ್ಯಾಚ್ ವರ್ಕ ಮಾಡದಿರುವುದು ಮತ್ತು ಮಳೆಗಾಲದಲ್ಲಿ ಡಾಂಬರೀಕರಣ ಕೈಗೊಂಡಿದ್ದರಿಂದ 5 ಕಿ.ಮೀ ಉದ್ದದ ರಸ್ತೆಯಲ್ಲಿ ಹಲವೆಡೆ ರಸ್ತೆ ಹಾಳಾಗಿದೆ. ಇನ್ನೂ ಕೆಲವು ದಿನಗಳಲ್ಲಿಯೇ ರಸ್ತೆ ಕಿತ್ತು ಹೋಗುವ ಸಾಧ್ಯತೆ ಹೆಚ್ಚಾಗಿದೆ. ಡಾಂಬರೀಕರಣ ರಸ್ತೆಯಾದರೂ ಅಲ್ಲಲ್ಲಿ ನೀರು ಹಿಡಿಯುತ್ತಿರುವುದರಿಂದ ಬೇಗ ಹಾಳಾಗುತ್ತಿದೆ.

ಈಗಾಗಲೇ ಹಲವು ಕಡೆಗಳಲ್ಲಿ ಹಾಳಾಗಿ ಡಾಂಬರಿಕರಣ ಜಲ್ಲಿ ಕಲ್ಲಿನ ದೂರು ಮತ್ತು ಮಣ್ಣು ತೇಲುತ್ತಿದೆ. ಅಂದಾಜು ₹ 5 ಕೋಟಿ ಮೊತ್ತದ ಈ ಹೆದ್ದಾರಿ ಸುಧಾರಣೆ ಕಾಮಗಾರಿ ಕಳಪೆ ಕಾಮಗಾರಿಗೆ ಬಲಿಯಾಗಿದ್ದಕ್ಕೆ ಸ್ಥಳೀಯರು ತೀವ್ರ
ಅಸಮಧಾನ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರಿಗೆ ಇನ್ನೂ ಕಾಮಗಾರಿಯ ಹಣ ಪಾವತಿಸಿಲ್ಲ. ರಸ್ತೆ ಪಡಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು. ಕಲ್ವರ್ಟಗಳ ಬೆಡ್ ವಿಸ್ತರಣೆ ಮಾಡಬೇಕಿದ್ದು, ಕಲ್ವರ್ಟ ಮೇಲಿನ ಬೆಡ್ ಮತ್ತು ರಸ್ತೆಗೂ ಅಂತರ ಹೆಚ್ಚಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ನಿವಾರಿಸಲು ಸ್ಥಳೀಯ ಜನ
ಒತ್ತಾಯಿಸಿದ್ದಾರೆ.

ಚಿಂಚೋಳಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ನಡೆಸಿದ ರಸ್ತೆ ಡಾಂಬರೀಕರಣ ಕಿತ್ತು ಹೋಗಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರನಿಗೆ ಪತ್ರದ ಮೂಲಕ ರಸ್ತೆ ಸರಿಪಡಿಸಲು ಸೂಚಿಸಿದ್ದೇನೆ. ರಾಜಿಯಾಗುವ ಪ್ರಶ್ನೆಯಿಲ್ಲ ಬಸವರಾಜ ಬೈನೂರು, ಎಇಇ, ಲೋಕೋಪಯೋಗಿ ಉಪವಿಭಾಗ ಚಿಂಚೋಳಿ
ಚಿಮ್ಮಾಈದಲಾಯಿ ಕ್ರಾಸ್‌ನಿಂದ ಚಿಂಚೋಳಿವರೆಗೆ ಸುರಿಯುವ ಮಳೆಯಲ್ಲಿಯೇ ಡಾಂಬರೀಕರಣ ಮಾಡಿದ್ದರು. ಕಾಮಗಾರಿ ಕಳಪೆ ಆಗಿರುವುದರಿಂದ ರಸ್ತೆ ಈಗ ಹತ್ತಾರು ಕಡೆ ಕಿತ್ತು ಹೋಗಿದೆ. ಸಂಬಂಧಿಸಿದವರು ಮರುನಿರ್ಮಿಸಬೇಕು ಬಂಡಪ್ಪ ಹೋಳ್ಕರ, ಗ್ರಾ.ಪಂ. ಮಾಜಿ ಸದಸ್ಯ, ಚಿಮ್ಮಾಈದಲಾಯಿ
ಚಿಂಚೋಳಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ನಡೆಸಿದ ರಸ್ತೆ ಡಾಂಬರು ಕಿತ್ತು ಹೋಗಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರನಿಗೆ ರಸ್ತೆ ಸರಿಪಡಿಸಲು ಸೂಚಿಸಿದ್ದೇನೆ. ರಾಜಿಯಾಗುವ ಪ್ರಶ್ನೆಯಿಲ್ಲ
–ಬಸವರಾಜ ಬೈನೂರು, ಎಇಇ, ಪಿಡಬ್ಲ್ಯುಡಿ ಉಪವಿಭಾಗ, ಚಿಂಚೋಳಿ
ಮಳೆಯಲ್ಲಿಯೇ ಡಾಂಬರೀಕರಣ ಮಾಡಿದ್ದರು. ಕಾಮಗಾರಿ ಕಳಪೆ ಆಗಿದ್ದು, ಈಗ ಹತ್ತಾರು ಕಡೆ ರಸ್ತೆ ಕಿತ್ತು ಹೋಗಿದೆ. ಸಂಬಂಧಿಸಿದವರು ಮರುನಿರ್ಮಿಸಬೇಕು
–ಬಂಡಪ್ಪ ಹೋಳ್ಕರ, ಗ್ರಾ.ಪಂ. ಮಾಜಿ ಸದಸ್ಯ, ಚಿಮ್ಮಾಈದಲಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.