ಚಿಂಚೋಳಿ: ತಾಲ್ಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆಯಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿದೆ.
ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಾಲ್ಲೂಕಿನ ಮೋತಕಪಳ್ಳಿ ಗ್ರಾಮದ ಶಿವಶರಣಪ್ಪ ಮೊತಕಪಳ್ಳಿ ಅಧ್ಯಕ್ಷರಾಗಿದ್ದಾರೆ. ಬೆ.9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಪುರಸಭೆ ಅಧ್ಯಕ್ಷ ಆನಂದ ಟೈಗರ್ ಉದ್ಘಾಟಿಸುವರು.
10.30ಕ್ಕೆ ಸಮ್ಮೇಳವನ್ನು ಶಾಸಕ ಡಾ.ಅವಿನಾಶ ಜಾಧವ ಉದ್ಘಾಟಿಸಲಿದ್ದು ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ. ಆಶಯ ನುಡಿ ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾ ಪಾಟೀಲ ತೇಗಲತಿಪ್ಪಿ ಹೇಳುವರು.
ಪ್ರಾಸ್ತಾವಿಕ ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ ಮಾತನಾಡುವರು. ಪೂಜಾ ಭಂಗಲಗಿ ಸಂಪಾದಕತ್ವದ ಚಿಂತನ ಬುಗ್ಗಿ ಸ್ಮರಣ ಸಂಚಿಕೆಯನ್ನು ಸಂಸದ ಸಾಗರ ಖಂಡ್ರೆ ಬಿಡುಗಡೆಗೊಳಿಸುವರು. ಸಿದ್ದಲಿಂಗಪ್ಪ ದೇಶಮುಖ ಅವರು ರಚಿಸಿದ ಚಿಂಚೋಳಿ ತಾಲ್ಲೂಕಿನ ಸಾಂಸ್ಕೃತಿಕ ದರ್ಶನ ಕೃತಿಯನ್ನು ಜಿ.ಪಂ ಯೋಜನಾಧಿಕಾರಿ ಜಗದೇವಪ್ಪ ಬೈಗೊಂಡ ಬಿಡುಗಡೆ ಮಾಡುವರು.
ಸಮ್ಮೇಳನದ ಅಧ್ಯಕ್ಷ ಶಿವಶರಣಪ್ಪ ಮೋತಕಪಳ್ಳಿ, ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಮಾಳಗೆ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್, ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ, ದೀಪಕನಾಗ ಪುಣ್ಯಶೆಟ್ಟಿ, ಭೀಮರಾವ್ ಟಿಟಿ ಸಹಿತ ಹಲವರು ಪಾಲ್ಗೊಳ್ಳುವರು.
ಮೊದಲ ಗೋಷ್ಠಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು ಸಮ್ಮೇಳನಾಧ್ಯಕ್ಷರ ಬದುಕು–ಬರಹದ ಕುರಿತು ಬಸವಕಲ್ಯಾಣದ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಲಿದ್ದಾರೆ. ಚಿಂಚೋಳಿ ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ ಕುರಿತು ಪತ್ರಕರ್ತ ಜಗನ್ನಾಥ ಶೇರಿಕಾರ, ಕೌಟುಂಬಿಕ ಸಾಮರಸ್ಯ ಕುರಿತು ಜಯಶ್ರೀ ಚಟ್ನಳ್ಳಿ ಮಾತನಾಡುವರು. ಅಧ್ಯಕ್ಷತೆಯನ್ನು ಜ್ಯೋತಿ ಬೊಮ್ಮಾ ವಹಿಸಲಿದ್ದಾರೆ.
ಮಧ್ಯಾಹ್ನ 2.15ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಜ್ಯೋತಿಲಿಂರ್ಗ ಸೂಗೂರು ಆಶಯ ನುಡಿ, ಅಧ್ಯಕ್ಷತೆ ಗುರುರಾಜ ಅಗ್ನಿಹೋತ್ರಿ ವಹಿಸುವರು. 27 ಕವಿಗಳು ಕವನ ವಾಚನ ಮಾಡುವರು. ಸಮಾರೋಪ ಮತ್ತು ಸತ್ಕಾರ ಸಮಾರಂಭ ಸಂಜೆ 4.30 ನಡೆಯಲಿದೆ. ಅಶೋಕ ಪಾಟೀಲ, ಸಮ್ಮೇಳನಾಧ್ಯಕ್ಷ ಶಿವಶರಣಪ್ಪ ಮೋತಕಪಳ್ಳಿ, ಕೈಲಾಸನಾಥ ಪಾಟೀಲ, ಡಾ. ವಿಕ್ರಮ ಪಾಟೀಲ, ಶಂಕರ ರಾಠೋಡ್ ಸಹಿತ ಹಲವರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಹಿಂದಿನ ಸಮ್ಮೇಳನಗಳ ನಿಕಟಪೂರ್ವ 6 ಅಧ್ಯಕ್ಷರು ಮತ್ತು 21 ಜನರಿಗೆ ಸನ್ಮಾನಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.