ಚಿಂಚೋಳಿ (ಕಲಬುರಗಿ ಜಿಲ್ಲೆ): ವೃದ್ಧೆ ಮೇಲೆ ಅತ್ಯಾಚಾರ ಎಸಗಿ, ನಗದು ಮತ್ತು ಚಿನ್ನ ದೋಚಿ ಪರಾರಿಯಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಭೋವಿ ಸಮಾಜದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಮಾಜದ ಜಿಲ್ಲಾ ಅಧ್ಯಕ್ಷ ಗುಂಡಪ್ಪ ಸಾಲಕುಂಕೆ, ತಾಲ್ಲೂಕು ಅಧ್ಯಕ್ಷ ಜಗನ್ನಾಥ ರಾಜಾಪುರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಕಚೇರಿ ಎದುರು ಪ್ರತಿಭಟನಾಕಾರರು ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದರು.
ವೃದ್ಧೆ ಮೇಲಿನ ಅತ್ಯಾಚಾರ ಮಾನವ ಕುಲಕ್ಕೆ ಕಳಂಕ ತರುವಂತಹದ್ದಾಗಿದೆ. ಯಾವುದೇ ಕಾರಣಕ್ಕೂ ಆರೋಪಿಯನ್ನು ಬಿಡಬಾರದು. ತಕ್ಷಣ ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಸಮಾಜದ ಮುಖಂಡರು, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ, ಪುರಸಭೆ ಸದಸ್ಯ ಜಗನ್ನಾಥ ಗುತ್ತೇದಾರ, ಹಿರಿಯ ಮುಖಂಡ ವಿಠಲ ನೆಲೋಗಿ, ವಿಠಲ ಕುಸಾಳೆ, ಹಣಮಂತ ಭೋವಿ ಗಾರಂಪಳ್ಳಿ, ಬಸವರಾಜ ವಾಡಿ, ಶ್ರೀಕಾಂತ ಪಿಟ್ಟಲ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ, ಗಿರಿರಾಜ ನಾಟಿಕಾರ, ನಾಗೇಶ ಹಿರೇವಡ್ಡರ, ಗೋಪಾಲ ಹಿರೇವಡ್ಡರ, ಹಣಮಂತ ಪೋಲಕಪಳ್ಳಿ, ಶ್ರೀಹರಿ ಕಾಟಾಪುರ, ರೇವಣಸಿದ್ದ ಮೋಘಾ, ಮಾರುತಿ ಗಂಜಗಿರಿ, ಮಾರುತಿ ಪಿಟ್ಟಲ, ಶಂಕರ ಕುಸಾಳೆ, ಗೋಪಾಲ ಚಂದ್ರಂಪಳ್ಳಿ, ಲಕ್ಷ್ಮೀಕಾಂತ ಚಂದ್ರಂಪಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.
ತಹಶೀಲ್ದಾರ್ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು. ಡಿವೈಎಸ್ಪಿ ಸಂಗಮನಾಥ ಹಿರೇಮಠ ಹಾಗೂ ಪೊಲೀಸರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.