ADVERTISEMENT

ಚಿತ್ತಾಪುರ | ಬಟ್ಟೆ ವ್ಯಾಪಾರಿಯಿಂದ 1.57 ಕೋಟಿ ಮೋಸ: ಎಫ್ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 5:35 IST
Last Updated 17 ಜೂನ್ 2024, 5:35 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಚಿತ್ತಾಪುರ: ಸಮೀಪದ ಶಹಾಬಾದ್ ನಗರದಲ್ಲಿನ ಬಟ್ಟೆ ವ್ಯಾಪಾರಿ ತಮ್ಮಲ್ಲಿ ಹಣ ಹೂಡಿದ್ದ 11 ಜನರಿಂದ ₹1.57 ಕೋಟಿ ಸಂಗ್ರಹ ಮಾಡಿ ಮರಳಿ ಕೊಡದೆ ಮೋಸ ಮಾಡಿದ ಹಾಗೂ 64 ಜನರಿಗೆ ವಂಚಿಸಿ ಓಡಿ ಹೋಗಿರುವ ದೂರಿನಡಿ ಒಂದೇ ಕುಟುಂಬದ ನಾಲ್ವರ ವಿರುದ್ಧ ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಎಫ್ಐಆರ್ ದಾಖಲಾಗಿದೆ.

ಭಂಕೂರು ಗ್ರಾಮದ ರೋಹಿತ್ ವಿಜಯಕಾಂತ ಪಾಟೀಲ ಅವರು ನೀಡಿದ ದೂರು ಆಧರಿಸಿ ಶಹಾಬಾದ್ ನಗರದಲ್ಲಿ ಸ್ಟ್ಯಾಂಡರ್ಡ್ ಕ್ಲಾಥ್ ಸ್ಟೋರ್ ಮಾಲೀಕ ಹರಜಿತಸಿಂಗ್ ಅವತಾರಸಿಂಗ್ ಭಾಟೀಯಾ, ಅಂಗದಸಿಂಗ್ ಹರಜಿತಸಿಂಗ್ ಭಾಟೀಯಾ, ಪುನಿತಸಿಂಗ್ ಹರಜಿತಸಿಂಗ್ ಭಾಟೀಯಾ, ಪ್ರೀತಿಕೌರ ಹರಜಿತಸಿಂಗ್ ಭಾಟೀಯಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ಶಹಾಬಾದ್ ನಗರದಲ್ಲಿದ್ದ ಸ್ಟ್ಯಾಂಡರ್ಡ್ ಕ್ಲಾಥ್ ಸ್ಟೋರಿನಲ್ಲಿಯೇ ಹರಜಿತಸಿಂಗ್ ಭಾಟೀಯಾ ಅವರು ಚಿಟ್ ಫಂಡ್, ಭಾಟೀಯಾ ಫೈನಾನ್ಸ್ ಮತ್ತು ಇನ್ವೆಸ್ಟಮೆಂಟ್ ಕಾರ್ಪೂರೇಷನ್‌ನಲ್ಲಿ ಮುದ್ದತ್ ಠೇವಣಿ, ಸಹಯೋಗ್ ಮನಿ ಸೇವಿಂಗ್ ಸ್ಕೀಂ ನಡೆಸಿ ಜನರಿಂದ ಹಣ ಸಂಗ್ರಹಿಸುತ್ತಿದ್ದ. ಹಣ ಹೂಡಿದ 11 ಜನರ ಠೇವಣಿಯ ಅವಧಿ ಮುಗಿದರೂ ಹಣ ಕೊಡದೆ ಫರಾರಿಯಾಗಿದ್ದಾನೆ. ಇನ್ನೂ 64 ಜನರಿಗೂ ಇದೇ ರೀತಿ ವಂಚಿಸಿ ಮೋಸ ಮಾಡಿದ್ದಾನೆ ಎಂದು ಹೆಸರು ಸಹಿತ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ದಾಖಲೆಯಿಂದ ತಿಳಿದು ಬಂದಿದೆ.

ವಂಚನೆಗೆ ಒಂದು ವರ್ಷದ ಸಿದ್ಧತೆ: ಹರಜಿತಸಿಂಗ್ ಸಾರ್ವಜನಿಕರಿಗೆ ವಂಚಿಸಲು ಕಳೆದ ಒಂದು ವರ್ಷದಿಂದ ಪೂರ್ವಸಿದ್ಧತೆ ಮಾಡಿಕೊಂಡಿದ್ದ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿವೆ.

ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಕಟ್ಟಡ ಮತ್ತು ಮನೆಯ ಕಟ್ಟಡ ಬೇರೆಯವರಿಗೆ ಲೀಜ್ ಕೊಟ್ಟು ಕಳೆದ ಮಾರ್ಚ್ 21 ರಂದು ರಾತ್ರಿ ಪತ್ನಿ ಮತ್ತು ಮಕ್ಕಳೊಂದಿಗೆ ಹೋಗಿದ್ದಾನೆ. ಮೊಬೈಲ್ ಸ್ವಿಚ್ ಆಪ್ ಆಗಿದೆ. ಸಂಪರ್ಕಕ್ಕೆ ದೊರೆಯುತ್ತಿಲ್ಲ ಎಂದು ವಂಚನೆಗೊಳಾದವರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.