ADVERTISEMENT

ಚಿತ್ತಾಪುರ | ಭವಾನಿ ದೇವಿ ಮೂರ್ತಿ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 15:25 IST
Last Updated 3 ಅಕ್ಟೋಬರ್ 2024, 15:25 IST
ಚಿತ್ತಾಪುರ ಪಟ್ಟಣದ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ ತಾಂಡಾದಲ್ಲಿ ಜೈಮಾತಾದಿ ನವರಾತ್ರಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪನೆಗೆ ತಂದಿರುವ ಭವಾನಿ ದೇವಿಯ ಮೂರ್ತಿಯನ್ನು ಗುರುವಾರ ಮೆರವಣಿಗೆ ಮಾಡಲಾಯಿತು
ಚಿತ್ತಾಪುರ ಪಟ್ಟಣದ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ ತಾಂಡಾದಲ್ಲಿ ಜೈಮಾತಾದಿ ನವರಾತ್ರಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪನೆಗೆ ತಂದಿರುವ ಭವಾನಿ ದೇವಿಯ ಮೂರ್ತಿಯನ್ನು ಗುರುವಾರ ಮೆರವಣಿಗೆ ಮಾಡಲಾಯಿತು   

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ಖೀರು ನಾಯಕ ತಾಂಡಾದಲ್ಲಿ ದಸರಾ ಹಬ್ಬದ ಅಂಗವಾಗಿ ನವರಾತ್ರಿ ಉತ್ಸವದ ಆಚರಣೆಗೆ ಸ್ಥಾಪನೆ ಮಾಡಲು ತಂದಿರುವ ಭವಾನಿ ದೇವಿಯ ಮೂರ್ತಿಯನ್ನು ಗುರುವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ಪಟ್ಟಣದ ಗಣೇಶ ಮಂದಿರ ಹತ್ತಿರ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ದೇವಿಯ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.

ರೈಲ್ವೆ ನಿಲ್ದಾಣ, ನಾಗಾವಿ ಚೌಕ್, ಒಂಟಿ ಕಮಾನದಿಂದ ಸ್ಟೇಷನ್ ತಾಂಡಾದವರೆಗೆ ಸಡಗರ, ಸಂಭ್ರಮ ಶ್ರದ್ಧಾಭಕ್ತಿಯಿಂದ ಮೆರವಣಿಗೆ ನಡೆಸಲಾಯಿತು.

ADVERTISEMENT

ಮೆರವಣಿಗೆಯಲ್ಲಿ ವೈವಿದ್ಯಮಯವಾಗಿ ಬಂಜಾರ ಮಹಿಳೆಯರು, ಯುವತಿಯರು ಉಡುಪು ಧರಿಸಿ ಬಂಜಾರ ಸಾಂಪ್ರದಾಯಿಕ ಹಾಡುಗಳಿಗೆ ಹಲಿಗೆ ವಾದನಕ್ಕೆ ತಕ್ಕಂತೆ ಹೆಜ್ಜೆ ನೃತ್ಯ ಮಾಡುವುದು ಆಕರ್ಷಕವಾಗಿತ್ತು. ಯುವಕರು ಡಿಜೆ ಸೌಂಡ್ ಹಾಡಿಕೆ ಕುಣಿದು ಕುಪ್ಪಳಿಸಿದರು.

ಮೆರವಣಿಗೆಯಲ್ಲಿ ತುಕಾರಾಮ ರಾಠೋಡ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಅನಿಲಕುಮಾರ ಚವಾಣ್, ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ರಾಠೋಡ, ಅಶ್ವಥರಾಮ ರಾಠೋಡ, ವಿಕಾಸ ಪವಾರ, ಸುರೇಶ ಚವಾಣ್, ರಾಜು ಜಾಧವ, ಶಿವರಾಮ ಚವಾಣ್, ಕುಮಾರ ರಾಟೋಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪುರುಷರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.