ADVERTISEMENT

ಕಲಬುರಗಿ: ಚರ್ಚ್‌ನಲ್ಲಿ ಖರ್ಜೂರದ ಗರಿಗಳ ಹಬ್ಬ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:32 IST
Last Updated 26 ಮಾರ್ಚ್ 2024, 15:32 IST
ಕಲಬುರಗಿಯ ಹಿಂದುಸ್ತಾನ್ ಕವನೆಂಟ್ ಚರ್ಚ್‌ನಲ್ಲಿ ಖರ್ಜೂರದ ಗರಿಗಳನ್ನು ಹಿಡಿದ ಕ್ರೈಸ್ತ ಧರ್ಮೀಯರು ಚರ್ಚಿನತ್ತ ತೆರಳಿದರು
ಕಲಬುರಗಿಯ ಹಿಂದುಸ್ತಾನ್ ಕವನೆಂಟ್ ಚರ್ಚ್‌ನಲ್ಲಿ ಖರ್ಜೂರದ ಗರಿಗಳನ್ನು ಹಿಡಿದ ಕ್ರೈಸ್ತ ಧರ್ಮೀಯರು ಚರ್ಚಿನತ್ತ ತೆರಳಿದರು   

ಕಲಬುರಗಿ: ನಗರದ ಜೆಸ್ಕಾಂ ಪ್ರಧಾನ ಕಚೇರಿಯ ಹತ್ತಿರ ಹಿಂದುಸ್ತಾನ್ ಕವನೆಂಟ್ ಚರ್ಚ್‌ನಲ್ಲಿ ಇತ್ತೀಚೆಗೆ ಖರ್ಜೂರದ ಗರಿಗಳ ಹಬ್ಬವನ್ನು ಆಚರಿಸಲಾಯಿತು.

ಯೇಸುಕ್ರಿಸ್ತನು ಶಿಲುಬೆಗೆ ಹಾಕುವ ಮುನ್ನ ಜೆರುಸಲೇಮಿಗೆ ಪ್ರವೇಶಿಸಿದನು. ಆಗ ಜನರೆಲ್ಲರೂ ಖರ್ಜೂರದ ಗರಿಗಳನ್ನು ತೆಗೆದುಕೊಂಡು ಆತನನ್ನು ಎದುರುಗೊಳ್ಳುವುದಕ್ಕೆ ಹೋದರು. ಜರುಸಲೇಮಿನ ಜನರೆಲ್ಲರೂ ‘ಜಯ ಕರ್ತನಾ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ. ಇಸ್ರಾಯೇಲಿನ ಅರಸನಿಗೆ ಆಶೀರ್ವಾದ‘ ಎಂದು ಕೂಗಿದರು. ಯೇಸು ಕತ್ತೆಮರಿಯನ್ನು ತರಿಸಿಕೊಂಡು ಅದರ ಮೇಲೆ ಕುಳಿತುಕೊಂಡು ಊರೊಳಗೆ ಪ್ರವೇಶಿಸಿದನು ಎಂಬ ಐತಿಹ್ಯವಿದೆ.

ಚರ್ಚಿನ ಫಾದರ್ ಸಾಮುವೇಲ್ ಭಾಲೇಕರ್ ಹಾಗೂ ಕ್ರೈಸ್ತರು ಈ ಹಬ್ಬದಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.