ADVERTISEMENT

ಮೋಡ ಕವಿದ ವಾತಾವರಣ: ಬಿಸಿಲು ಕಾಣದ ಕಲಬುರಗಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 6:42 IST
Last Updated 13 ನವೆಂಬರ್ 2021, 6:42 IST
ಕಲಬುರಗಿ ನಗರದಲ್ಲಿ ಮೋಡ ಕವಿದ ವಾತಾವರಣವಿದೆ
ಕಲಬುರಗಿ ನಗರದಲ್ಲಿ ಮೋಡ ಕವಿದ ವಾತಾವರಣವಿದೆ   

ಕಲಬುರಗಿ: ನಿಗಿ ನಿಗಿ ಕೆಂಡದಂತೆ ಸುಡುವ ಸೂರ್ಯನ ತಾಪಕ್ಕೆ ಹೆಸರಾದ ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ ಸೂರ್ಯನ ದರ್ಶನವೇ ಆಗಿಲ್ಲ.

ಚಳಿಗಾಲದ ಜೊತೆಗೆ ವಾಯುಭಾರ ಕುಸಿತವಾಗಿದ್ದರಿಂದ ಮರಗುಟ್ಟುವ ಚಳಿಯ ಅನುಭವ ಆಗುತ್ತಿದೆ.

ಶನಿವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಶರದೃತುವಿನ ತಂಗಾಳಿ ಬೀಸುತ್ತಿದೆ. ಜಿಟಿ ಜಿಟಿ ಮಳೆಯೂ ಸುರಿಯಿತು.

ADVERTISEMENT

ಬಿಸಿಲಿಗೆ ಹೆಸರಾದ ಕಲಬುರಗಿ ಅತಿ ಚಳಿಯ ಪ್ರದೇಶದಂತೆ ಕಾಣುತ್ತಿದೆ.

ಮನೆಯ ಕಪಾಟಿನಲ್ಲಿದ್ದ ಸ್ವೆಟರ್ ಗಳು ಹೊರಬಂದಿವೆ. ಬೀದಿ ಬದಿಯ ಚಹಾ ಅಂಗಡಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬಿಸಿ ಬಿಸಿ ಚಹಾ ಕುಡಿಯುತ್ತಿದ್ದಾರೆ.

ಏಪ್ರಿಲ್, ಮೇ ತಿಂಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಲಬುರಗಿಯಲ್ಲಿ ಶನಿವಾರ 23 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.