ಶಹಾಬಾದ್: ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ ರೋಗಿಗಳ ಮತ್ತು ಹೆರಿಗೆ ಕೊಠಡಿಗಳ ಪರಿಶೀಲನೆ ಮಾಡಿದರು.
ಆಸ್ಪತ್ರೆಗೆ ಜಿಲ್ಲಾಧಿಕಾರಿ ಬರುವ ಮಾಹಿತಿ ಇದ್ದರೂ ಕೆಲ ವೈದ್ಯರು ಅನುಪಸ್ಥಿತಿ ಇರುವುದು ಜಿಲ್ಲಾಧಿಕಾರಿ ಗಮನಕ್ಕೆ ಬಂತು. ಜೆತೆಗೆ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಏಕೆ ಮಾಡುತ್ತಿಲ್ಲ ಎಂದು ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ಸಂಧರ್ಭದಲ್ಲಿ ಜೆಪಿ ಪರಿವಾರದ ಮುಖಂಡರು ಆಸ್ಪತ್ರೆಯಲ್ಲಿ ಔಷಧ ಲಭ್ಯ ಇಲ್ಲದಿರುವುದು ಮತ್ತು ಮಹಿಳಾ ವೈದ್ಯರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸದೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಂಗವಿಕಲರ ಸಂಘದಿಂದ ತಾಲ್ಲೂಕಿನಲ್ಲಿ ಯುಡಿಐಡಿ ಕಾರ್ಡ್ ಸ್ಥಳೀಯವಾಗಿ ಮಾಡುವಂತೆ ಮನವಿ ಸಲ್ಲಿಸಿದರು. ಎನ್ಎಸಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೌರಕಾರ್ಮಿಕರು ಸುಮಾರು 15-20 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದೇವೆ. ಆದರೆ ಈಗ ಕಲಸದಿಂದ ದಿಢೀರನೆ ತೆಗೆದು ಹಾಕಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಆಸ್ಪತ್ರೆಯ ಕುಂದುಕೊರತೆ ಬಗ್ಗೆ ಮನವಿ ಸಲ್ಲಿಸಲು ಬಂದಿರುವ, ಬಿಎಸಪಿ ಮತ್ತು ಕರವೇ ಹಾಗೂ ಕದಸಂಸ ಮುಖಂಡರು ಮುಖಂಡರಿಗೆ ಮತ್ತು ಪತ್ರಕರ್ತರಿಗೆ ಮಾಹಿತಿ ನೀಡದೇ ಜಿಲ್ಲಾಧಿಕಾರಿ ತರಾತುರಿಯಲ್ಲಿ ಹೊರಟು ಹೋದರು.
ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಜಿ.ಪಂ ಸಿಇಒ ಭಂವರ್ ಸಿಂಗ್, ತಹಶೀಲ್ದಾರ್ ಜಗದೀಶ ಚೌರ, ಪೌರಾಯುಕ್ತ ಕೆ. ಗುರುಲಿಂಗಪ್ಪ, ತಾ.ಪಂ ಇಒ ಮಲ್ಲಿನಾಥ ರಾವೂರ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಹೀಮ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.