ADVERTISEMENT

ಅಫಜಲಪುರ: ವರ್ಗಾವಣೆಗಾಗಿ ಅಧಿಕಾರಿಗಳ ಕಸರತ್ತು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:42 IST
Last Updated 2 ಜುಲೈ 2024, 15:42 IST
ಅಫಜಲಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ.
ಅಫಜಲಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ.   

ಅಫಜಲಪುರ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ವ್ಯಾಪ್ತಿಯ ಹೋಬಳಿ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಸುನೀಲ್‌ ಕುಮಾರ್‌ ವರ್ಗಾವಣೆಯಾಗಿದ್ದು, ಆ ಸ್ಥಾನಕ್ಕೆ ಬರಲು ಅಧಿಕಾರಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಲ್ಲದೇ ಆ ಸ್ಥಾನಕ್ಕೆ ಬರಲು ₹ 4–5 ಲಕ್ಷದವರೆಗೂ ಹಣ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿವೆ.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತೋಟಗಾರಿಕೆ ಕ್ಷೇತ್ರ ಅಫಜಲಪುರ ತಾಲ್ಲೂಕಿನಲ್ಲಿದೆ. ನರೇಗಾ ಯೋಜನೆ ಅಡಿಯಲ್ಲಿ ಸಾಕಷ್ಟು ರೈತರು ಬಾಳೆ, ಪಪ್ಪಾಯಿ, ನುಗ್ಗೆ, ಲಿಂಬು, ಈರುಳ್ಳಿ, ಮೆಣಸಿನಕಾಯಿ, ದ್ರಾಕ್ಷಿ  ಹಾಗೂ ತರಕಾರಿಯನ್ನು ಬೆಳೆಯುತ್ತಾರೆ. ಸರ್ಕಾರದಿಂದ ಅನುದಾನವೂ ಹೆಚ್ಚಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಈ ತಾಲ್ಲೂಕಿಗೆ ವರ್ಗವಾಗಿ ಬರಲು ಪೈಪೋಟಿ ನಡೆಸುತ್ತಾರೆ ಎಂದು ರೈತರು ಹೇಳುತ್ತಾರೆ.

ಹೋಬಳಿ ಕೇಂದ್ರದಲ್ಲಿ ಸುನಿಲ್ ಕುಮಾರ್ ಎಂಬವರು ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರನ್ನು ಬೇರೆಡೆ ವರ್ಗಾವಣೆ ಮಾಡಿಸಿ, ಆ ಹುದ್ದೆಗೆ ತಾವು ಬರಬೇಕು ಎಂದು ನಾಲ್ವರು ಅಧಿಕಾರಿಗಳು ಒಂದು ತಿಂಗಳಿಂದ ಕಸರತ್ತು ನಡೆಸಿದ್ದಾರೆ. ಇಲ್ಲಿಗೆ ಬರಲು ₹4 ಲಕ್ಷದಿಂದ ₹5 ಲಕ್ಷದವರೆಗೆ ಹಣ ನೀಡಲು ಅಧಿಕಾರಿಗಳು ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.