ADVERTISEMENT

ಅಫಜಲಪುರ | ದತ್ತ ದೇಗುಲ: ಹುಂಡಿಯಲ್ಲಿ ₹68.23 ಲಕ್ಷ ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 16:17 IST
Last Updated 14 ನವೆಂಬರ್ 2024, 16:17 IST
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದಲ್ಲಿ ಸಮಿತಿಯ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಯವರು ಹುಂಡಿ ಎಣಿಕೆ ಮಾಡುತ್ತಿರುವುದು.
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದಲ್ಲಿ ಸಮಿತಿಯ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಯವರು ಹುಂಡಿ ಎಣಿಕೆ ಮಾಡುತ್ತಿರುವುದು.   

ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದಲ್ಲಿ ಭಕ್ತರು ಹುಂಡಿಯಲ್ಲಿ ಹಾಕಿರುವ ದೇಣಿಗೆಯನ್ನು ಬುಧವಾರ ಒಡೆದು ಎಣಿಕೆ ಮಾಡಿದ್ದು ಒಟ್ಟು ₹ 68.23 ಲಕ್ಷ ಸಂಗ್ರಹವಾಗಿದೆ ಎಂದು ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತಮ್ಮ ತಿಳಿಸಿದರು.

‘ವರ್ಷದಲ್ಲಿ ನಾಲ್ಕು ಬಾರಿ ಹುಂಡಿಯನ್ನು ಎಣಿಕೆ ಮಾಡಲಾಗುತ್ತದೆ. ಎಣಿಕೆಯಲ್ಲಿ ನೋಟುಗಳು ನಾಣ್ಯಗಳು ಮತ್ತು ಚಿನ್ನ, ಬೆಳ್ಳಿ ಕೂಡಿದೆ. ಎಲ್ಲವನ್ನೂ ಸಂಗ್ರಹಿಸಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಇಡಲಾಗುವುದು’ ಎಂದು ತಿಳಿಸಿದ್ದಾರೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಶಿರಸ್ತೇದಾರ ಅವಿನಾಶ್ ದೇಶಪಾಂಡೆ, ದೇವಮ್ಮ, ಮಹೇಶ ಈರಯ್ಯ ಸ್ವಾಮಿ, ಚನ್ನಬಸು, ದೇವಸ್ಥಾನ ಸಮಿತಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ದತ್ತು ನಿಂಬರಗಿ, ಶೀಲಾ, ಸತೀಶ್ ಸಿಂಗ್, ಧನರಾಜ್, ಶರಣಯ್ಯ ಸ್ವಾಮಿ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.