ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಐನಾಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 6.27ಕ್ಕೆ ಲಘು ಭೂಕಂಪನ ಸಂಭವಿಸಿದೆ. ಭೂಮಿಯಿಂದ ಸದ್ದು ಕೇಳಿ ಬಂದಿದೆ. ಜತೆಗೆ ಭೂಮಿ ನಡುಗಿದ ಅನುಭವವಾಯಿತು ಎಂದು ಶಿಕ್ಷಕ ಸಂತೋಷ ಗುತ್ತೇದಾರ ತಿಳಿಸಿದ್ದಾರೆ.
ನಾನು ಬೆಳಿಗ್ಗೆ ಮಕ್ಕಳಿಗೆ ಆನ್‌ಲೈನ್ ಪಾಠ ಮಾಡುತ್ತಿರುವಾಗ ಭೂಮಿ ನಡುಗಿದಂತಾಯಿತು. ಇದೇ ಅನುಭವವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಐನಾಪುರ ಸಮೀಪ ಬರುವ ಬೀದರ್ ಜಿಲ್ಲೆಯ ಕೂಡಂಬಲ್ ಗ್ರಾಮದಲ್ಲಿ ಭೂಮಿಯಿಂದ ಸದ್ದು ಕೇಳಿ ಬರುತ್ತಿದೆ. ಈಗ ಐನಾಪುರ ಸುತ್ತಲಿನ ಗ್ರಾಮದಲ್ಲೂ ಲಘು ಕಂಪನ ಸಂಭವಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಶರಣ ಶಿರಸಗಿಯ ಭೂಕಂಪನ ಮಾಪಕ ಕೇಂದ್ರದಲ್ಲಿ ಯಾವುದೇ ದತ್ತಾಂಶ ದಾಖಲಾಗಿಲ್ಲ. ಅದರೆ ಹೈದರಾಬಾದ್ ರಾಷ್ಟ್ರೀಯ ಭೂ ಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ ಅವರ ಬಳಿ ದತ್ತಾಂಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ತಾಲ್ಲೂಕಿನ ಗಡಿಕೇಶ್ವಾರದಲ್ಲೂ ಲಘು ಕಂಪನ ಸಂಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.