ADVERTISEMENT

‘ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರೂ ನಿಸ್ಸೀಮರು’

ಖೂಬಾ ಪರ ಮತಯಾಚನೆಯಲ್ಲಿ ಶಾಸಕ‌ ಅವಿನಾಶ ಜಾಧವ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 6:08 IST
Last Updated 30 ಏಪ್ರಿಲ್ 2024, 6:08 IST
ಚಿಂಚೋಳಿ ತಾಲ್ಲೂಕು ನರನಾಳದಲ್ಲಿ ಬಿಜೆಪಿ ಸೇರಿದ ಮುಖಂಡರಿಗೆ ಶಾಸಕ ಡಾ. ಅವಿನಾಶ ಜಾಧವ ಸೋಮವಾರ ಸನ್ಮಾನಿಸಿ ಬರ ಮಾಡಿಕೊಂಡರು
ಚಿಂಚೋಳಿ ತಾಲ್ಲೂಕು ನರನಾಳದಲ್ಲಿ ಬಿಜೆಪಿ ಸೇರಿದ ಮುಖಂಡರಿಗೆ ಶಾಸಕ ಡಾ. ಅವಿನಾಶ ಜಾಧವ ಸೋಮವಾರ ಸನ್ಮಾನಿಸಿ ಬರ ಮಾಡಿಕೊಂಡರು   

ಚಿಂಚೋಳಿ: ‘ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅಧಿಕಾರಕ್ಕಾಗಿ ಸುಳ್ಳು ನೂರುಬಾರಿ‌ ಹೇಳಿ ಸತ್ಯವೆಂದು ಬಿಂಬಿಸಲು ಹೊರಟಿದ್ದಾರೆ. 60 ವರ್ಷ ದೇಶದ ಜನರಿಗೆ ಸುಳ್ಳು ಹೇಳಿ ಯಾಮಾರಿಸಿದ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ. ಹೀಗಾಗಿ ಜನರು ನರೇಂದ್ರ ಮೋದಿ ಅವರ ಬೆನ್ನಿಗೆ‌ ನಿಂತಿದ್ದಾರೆ’ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.

ತಾಲ್ಲೂಕಿನ ಅಣವಾರ, ಪೋಲಕಪಳ್ಳಿ, ಗಾರಂಪಳ್ಳಿ, ರುಸ್ತಂಪುರ, ನರನಾಳ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಪರ ಸೋಮವಾರ ಮತಯಾಚಿಸಿ ಮಾತನಾಡಿದರು.

ಭಗವಂತ ಖೂಬಾ ಅವರು ಸಜ್ಜನ ರಾಜಕಾರಣಿ, ಅಭಿವೃದ್ಧಿ ಪರ ನಾಯಕ. ದೂರದೃಷ್ಟಿಯ ನಾಯಕರು. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ವಿಮಾನ‌ ನಿಲ್ದಾಣ, ಬೆಳೆವಿಮೆ ಪರಿಹಾರ ದೊರಕಿಸಿಕೊಡಲು ಉತ್ತಮ‌ಕೆಲಸ ಮಾಡಿದ್ದಾರೆ. ಬೆಲೆ ಏರಿಕೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು, ಅಡುಗೆ ಅನಿಲ, ಪೆಟ್ರೊಲ, ಡೀಸೆಲ್ ಮೇಲೆ ವಿಧಿಸಿದ ರಾಜ್ಯದ ಪಾಲಿನ ತೆರಿಗೆ ಕಡಿತ ಮಾಡಲಿ ಎಂದು ಸವಾಲು ಹಾಕಿದರು.

ADVERTISEMENT

ಬಿಜೆಪಿಯಿಂದ ದೇಶ ಸುರಕ್ಷಿತ. ಮೋದಿಯನ್ನು ನಾವು ಕಳೆದುಕೊಂಡರೆ ನಮಗೆ ಅಂತಹ ನಾಯಕ ದೊರೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ದೇಶ ಕೊಳ್ಳೆ ಹೊಡೆದು ಮನೆ ಸೇರಿದ್ದಾರೆ. ಈಗ ಅವರ ಕಣ್ಣು ಜನರ ಪಿತ್ರಾರ್ಜಿತ ಆಸ್ತಿಯ ಮೇಲೆ ಬಿದ್ದಿದೆ. ತಿಂಗಳಿಗೆ ₹ 2 ಸಾವಿರ ಹಣ ನೀಡಿ, ನಿಮ್ಮ ಆಸ್ತಿ ಕೊಳ್ಳೆ ಹೊಡೆಯಲು ಹೊಂಚು ಹಾಕುತ್ತಿದೆ ಎಂದರು.

ಮುಖಂಡರಾದ ಲಕ್ಷ್ಮೀನರಸಿಂಹರೆಡ್ಡಿ ಹುಮ್ನಾಬಾದ, ರಾಮರೆಡ್ಡಿ ಪಾಟೀಲ, ಚಿತ್ರಶೇಖರ ಪಾಟೀಲ., ಶಿವರಾಯ ಹಿತ್ತಲ, ನಂದಿಕುಮಾರ ಪಾಟೀಲ, ಹಣಮಂತ ಭೋವಿ, ಗೋಪಾಲ‌ ಜಾಧವ,
ಶಂಕರ ಶಿವಪುರಿ, ಕಿಶನ್‌, ನಾಗೀಂದ್ರಪ್ಪ ಸರಡಗಿ, ಬಸವಂತರೆಡ್ಡಿ ಪಾಟೀಲ, ಸೋಮಶೇಖರ ಮಂಗಲಗಿ, ಶಂಕರ ಹಿತ್ತಲ, ನಾರಾಯಣ ನಾಟಿಕಾರ, ರವಿ ರುಸ್ತಂಪುರ, ಯಾಲ್ಲಾಲಿಂಗ ರುಸ್ತಂಪುರ, ಬಸವರಾಜ ದೇಶಮುಖ, ಹಣಮಂತ ಭೋವಿ ಗಾರಂಪಳ್ಳಿ, ಪ್ರಕಾಶ ಗುತ್ತೇದಾರ, ಮೋಹನ ಗುತ್ತೇದಾರ, ಬಂಡಾರೆಡ್ಡಿ ಆಡಕಿ, ಗುರು ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ದಂಡಿನ, ವಿಶಾಲ ಪಾಟೀಲ, ಮಾರುತಿ ಯಂಪಳ್ಳಿ ಮೊದಲಾದವರು ಹಾಜರಿದ್ದರು.

ಚಿಂಚೋಳಿ ತಾಲ್ಲೂಕು ರುಸ್ತಂಪುರದಲ್ಲಿ ಶಾಸಕ ಡಾ. ಅವಿನಾಶ ಜಾಧವ ಅವರು ಬೀದರ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ ಪರ ಸೋಮವಾರ ಮತಯಾಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.