ADVERTISEMENT

ಸಮಸ್ಯೆಗೆ ಸ್ಪಂದಿಸಲು ರೈತರ ಆಗ್ರಹ

ಮಾದನ ಹಿಪ್ಪರಗಿ: ಜೆಸ್ಕಾಂ ಗ್ರಾಹಕರ ಸಂವಾದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 7:15 IST
Last Updated 17 ಫೆಬ್ರುವರಿ 2022, 7:15 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ನಡೆದ ಜೆಸ್ಕಾಂ ಗ್ರಾಹಕರ ಸಂವಾದ ಸಭೆಯಲ್ಲಿ ಇಒ ಸಂತೋಷ ಚವ್ಹಾಣರಿಗೆ ಹಡಲಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಎಇಇ ಮಾಣಿಕ ಕುಲಕರ್ಣಿ, ಪರಮೇಶ ಬಡಿಗೇರ ಇದ್ದರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ನಡೆದ ಜೆಸ್ಕಾಂ ಗ್ರಾಹಕರ ಸಂವಾದ ಸಭೆಯಲ್ಲಿ ಇಒ ಸಂತೋಷ ಚವ್ಹಾಣರಿಗೆ ಹಡಲಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಎಇಇ ಮಾಣಿಕ ಕುಲಕರ್ಣಿ, ಪರಮೇಶ ಬಡಿಗೇರ ಇದ್ದರು   

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಜೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಮಂಗಳವಾರ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವು ಗ್ರಾಮದ ರೈತರೂ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಆಗ್ರಹಿಸಿದರು.

ಜೆಸ್ಕಾಂ ಕಲಬುರಗಿ ಗ್ರಾಮೀಣ ಉಪವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ ರೈತರಿಂದ ವಿದ್ಯುತ್ ಕುಂದುಕೊರತೆ, ಅಹವಾಲುಗಳ ಸ್ವೀಕಾರ ಕಾರ್ಯ ನಡೆಯಿತು.

ಜಿ.ಪಂ ಮಾಜಿ ಸದಸ್ಯ ಮಲ್ಲಿನಾಥ ಪಾಟೀಲ ಮದಗುಣಕಿ, ರೈತ ನಾಗೇಂದ್ರಪ್ಪ ಪಾಟೀಲ ಮೇಘಾ(ಬಿ) ಮಾತನಾಡಿ, ಕಳೆದ ವರ್ಷದಿಂದ ರೈತ ಗ್ರಾಹಕರ ಸಭೆ ನಡೆಸಲಾಗುತ್ತಿದೆ. ಆದರೆ ರೈತರ ಹೊಲದಲ್ಲಿನ ವಿದ್ಯುತ್ ಪರಿವರ್ತಕ ಅಳವಡಿಕೆ, ಸಮರ್ಪಕ ವಿದ್ಯುತ್ ಸರಬುರಾಜು, ಹೊಸಕಂಬ ಜೋಡಣೆ ಮತ್ತಿತರ ಸಮಸ್ಯೆಗಳಿಗೆ ಸತತ ಮನವಿ ಸಲ್ಲಿಸಿದರೂ ಈವರೆಗೆ ಸ್ವಂದಿಸಿಲ್ಲ. ಹೀಗಾದರೆ ಇಂತಹ ಸಭೆ ಏಕೆ ಆಯೋಸುವದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಿಸಾನ ಘಟಕದ ಕಾರ್ಯದರ್ಶಿ ನಿಲೇಶ ತೊಳನೂರು ಮಾತನಾಡಿದರು.

ಹಡಲಗಿ ಗ್ರಾಮದ ರೈತರಾದ ಸತೀಶ ಕುಲಕರ್ಣಿ, ಹಣಮಂತರಾವ ಪಾಟೀಲ ಹಾಗೂ ಚಲಗೇರಾ ಗ್ರಾಮದ ರೈತ ಮುಖಂಡ ಬಿ.ಜಿ.ಪಾಟೀಲ, ವಿದ್ಯುತ್ ಕಂಬಗಳ ಬದಲಾವಣೆ ಮಾಡಿ ಹೊಸ ಕಂಬ ಮತ್ತು ತಂತಿ ಜೋಡಣೆಗೆ ಮನವಿ ಮಾಡಿದರು.

ರೈತರ ಮನವಿ ಸ್ವೀಕರಿಸಿ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಚವ್ಹಾಣ, ಮಳೆಗಾಲದ ಪೂರ್ವದಲ್ಲಿ ಗ್ರಾಮೀಣ ಭಾಗದ ರೈತರ ಹಲವು ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಲು ಯೋಜನೆ ರೂಪಿಸಲಾಗುತ್ತಿದೆ. ಸಿಬ್ಬಂದಿಗಳಿಂದ ಹಣವಸೂಲಿ ಆರೋಪ ಕೇಳಿ ಬರುತ್ತಿದೆ, ಯಾರಿಗೂ ಹಣ ನೀಡಬೇಡಿ ಎಂದು ತಿಳಿಸಿದರು.

ಜೆಸ್ಕಾಂ ಎಇಇ ಮಾಣಿಕರಾವ ಕುಲಕರ್ಣಿ, ಶಾಖಾಧಿಕಾರಿ ಪರಮೇಶ್ವರ ಬಡಿಗೇರ, ಯಲ್ಲಾಲಿಂಗ ಶಿರೂರು, ಸಿದ್ದರಾಮ ದೇವಂತಗಿ, ನಾಗರಾಜ ಪಾಟೀಲ ಇದ್ದರು. ಮುಖಂಡರಾದ ಸುಭಾಷ ಪಾಟೀಲ, ಸಿದ್ದರಾಮ ಅರಳಿಮರ, ರಾಜಶೇಖರ ಕಂಬಾರ, ಶಾಂತಮಲ್ಲಪ್ಪ ಕಬಾಡಗಿ, ಅಮೃತ ವಗ್ಗಿ, ಸೀತಾರಾಮ ಜಮದಾರ, ಮಲ್ಲಿನಾಥ ಯಳಮೇಲಿ, ಸಿದ್ದರಾಮ ಮೈಂದರ್ಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.