ADVERTISEMENT

‘ಫಸಲ್ ಬಿಮಾ ಯೋಜನೆಗೆ ಹೆಸರು ನೋಂದಾಯಿಸಿ’

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:28 IST
Last Updated 14 ಜೂನ್ 2024, 16:28 IST

ಕಲಬುರಗಿ: ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಮುಂಗಾರು ಹಂಗಾಮಿಗೆ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಭತ್ತ (ನೀರಾವರಿ), ಮುಸುಕಿನ ಜೋಳ, ಜೋಳ, ಸಜ್ಜೆ (ಮಳೆಯಾಶ್ರಿತ), ನವಣಿ (ಮಳೆಯಾಶ್ರಿತ), ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ಉದ್ದು, ಎಳ್ಳು (ಮಳೆಯಾಶ್ರಿತ), ಶೇಂಗಾ, ಹತ್ತಿ (ನೀರಾವರಿ ಮತ್ತು ಮಳೆಯಾಶ್ರಿತ) ಹಾಗೂ ಸೋಯಾ ಅವರೆ (ಮಳೆಯಾಶ್ರಿತ) ಬೆಳೆಗಳಿಗೆ ರೈತರು ನಿರ್ಧರಿತ ಬೆಳೆವಾರು ವಿಮಾ ಮೊತ್ತ ಪಾವತಿಸಿ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ.

ಹೆಸರು (ಮಳೆಯಾಶ್ರಿತ) ಜುಲೈ 15, ಸೂರ್ಯಕಾಂತಿ ಬೆಳೆಗೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 16 ಕೊನೆಯ ದಿನವಾಗಿದೆ. ಬೆಳೆಸಾಲ ಪಡೆಯದ ರೈತರು ನೋಂದಣಿಗೆ ಪಹಣಿ, ಆಧಾರ್‌ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ/ಪಾಸ್ ಬುಕ್ ಮತ್ತು ಆಧಾರ್‌ ಸಂಖ್ಯೆಯೊಂದಿಗೆ ಡಿಸಿಸಿ, ಇತರೆ ಬ್ಯಾಂಕ್, ಗ್ರಾಮ್ ಒನ್ ಮತ್ತು ಸಿಎಸ್‌ಸಿ ಕೇಂದ್ರಗಳಿಗೆ ಸಂಪರ್ಕಿಸಬೇಕು. ರೈತರು ನೋಂದಣಿಗಾಗಿ (ಫ್ರೂಟ್ಸ್‌ ಐಡಿ) ಕಡ್ಡಾಯವಾಗಿ ಹೊಂದಿರಬೇಕು.

ADVERTISEMENT

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.