ADVERTISEMENT

ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂದಿದ್ದ ಮಾಶಾಳ ಶ್ರೀ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 15:26 IST
Last Updated 11 ನವೆಂಬರ್ 2024, 15:26 IST
<div class="paragraphs"><p>ಮಾಶಾಳ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ</p></div>

ಮಾಶಾಳ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ

   

ಅಫಜಲಪುರ (ಕಲಬುರಗಿ ಜಿಲ್ಲೆ): ‘ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು, ತಲ್ವಾರ್ ಕೊಡಿ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಮಾಶಾಳ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಪಟ್ಟಣದಲ್ಲಿ ಭಾನುವಾರ ನಡೆದ ವಕ್ಫ್ ಹಠಾವೊ ದೇಶ ಬಚಾವೊ ಹೋರಾಟದಲ್ಲಿ ಮರುಳಾರಾಧ್ಯ ಶಿವಾಚಾರ್ಯರು ಭಾಗಿಯಾಗಿ ಭಾಷಣ ಮಾಡುವ ಭರದಲ್ಲಿ ಸ್ವಾಮೀಜಿ ಏನಾದರೂ ವಕ್ಫ್ ಬೋರ್ಡ್ ತೆಗೆಯದಿದ್ದರೆ ನಾವು ಜೀವ ಕೊಡುವುದಕ್ಕೂ, ಜೀವ ತೆಗೆಯಲಿಕ್ಕೂ ತಯಾರಾಗಿದ್ದೇವೆ. ನಮ್ಮ ಎಲ್ಲಾ ಯುವಕರ ಮನೆಯಲ್ಲಿ ತಲ್ವಾರ್, ಎಲ್ಲಾನು ಇವೆ’ ಎಂದಿದ್ದರು ಇದನ್ನು ಆಧರಿಸಿ ಬಿಎಎನ್‌ಎಸ್ ಕಾಯ್ದೆಯ ಅನುಸಾರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ADVERTISEMENT

ಅಫಜಲಪುರ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದ್ದರು.

ಸ್ವಾಮೀಜಿ ಹೇಳಿಕೆ ಖಂಡಿಸಿರುವ ಅಫಜಲಪುರ ಶಾಸಕ ಎಂ.ವೈ. ಪಾಟೀಲ, ‘ನಾವೆಲ್ಲರೂ ಒಟ್ಟಾಗಿ ಬಾಳುವ ಸಮಾಜದಲ್ಲಿ ಪ್ರಚೋದನಕಾರಿ ಭಾಷಣದಿಂದ ಸಮಾಜದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರುವಂತದ್ದಾಗಿದೆ. ಸಮಾಜಕ್ಕೆ ದಾರಿ ದೀಪವಾಗ ಬೇಕಾಗಿರುವ ಮರುಳಾರಾಧ್ಯ ಶ್ರೀಗಳ ಹೇಳಿಕೆ ಖಂಡನೀಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.