ADVERTISEMENT

ರಸ್ತೆ ಮೇಲೆ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 11:37 IST
Last Updated 15 ನವೆಂಬರ್ 2024, 11:37 IST
ಯಡ್ರಾಮಿ ತಾಲ್ಲೂಕಿನ ಸಾಥಖೇಡ ಗ್ರಾಮದಲ್ಲಿ ರಸ್ತೆ ಮೇಲೆ ಬಿದ್ದ ಕಸ
ಯಡ್ರಾಮಿ ತಾಲ್ಲೂಕಿನ ಸಾಥಖೇಡ ಗ್ರಾಮದಲ್ಲಿ ರಸ್ತೆ ಮೇಲೆ ಬಿದ್ದ ಕಸ   

ಯಡ್ರಾಮಿ: ತಾಲ್ಲೂಕಿನ ಸಾಥಖೇಡ ಗ್ರಾಮದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಗ್ರಾಮ ಕೆಲವೆಡೆ ಗಬ್ಬುವಾಸನೆ ಬರುತ್ತಿದೆ. ಈಚೆಗೆ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕದೆ. ಆದರೆ ಕೊಳಚೆ ಮಾತ್ರ ಹಾಗೇ ಇದೆ.

ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ, ಕಿರು ರಸ್ತೆ, ಮುಖ್ಯ ರಸ್ತೆಯಲ್ಲಿ ಕಸದ ರಾಶಿಯನ್ನೇ ತುಂಬಿರುತ್ತದೆ. ಇಲ್ಲಿನ ಆಡಳಿತ ಅಧಿಕಾರಿಗಳಿಗೆ ಗ್ರಾಮಸ್ಥರು ಅನೇಕ ಬಾರಿ ಈ ಕುರಿತು ತಿಳಿಸಿದರೂ ಕ್ಯಾರೆ ಎಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಿದೆ. ಒಳಚರಂಡಿ ಸಹ ಇಲ್ಲದೆ ಇರುವುದರಿಂದ ರಸ್ತೆ ಮೇಲೆ ನಳದ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೂ ತೊಂದರೆ ಉಂಟಾಗಿದೆ. ಮಳೆಗಾಲದಲ್ಲಿ ರೈತರು ಬಂಡಿ, ಟ್ರ್ಯಾಕ್ಟರ್, ಬೈಕ್ ಸಹ ಓಡಾಡುವುದಿಲ್ಲ. ಕಾಲ್ನಡಿಗೆಯಲ್ಲಿಯೇ ಕೆಸರಿನ ರಸ್ತೆಯಲ್ಲೇ ಹೆಜ್ಜೆ ಹಾಕುತ್ತ ಹೋಗಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.

ADVERTISEMENT

ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.