ADVERTISEMENT

ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬರುತ್ತಿದ್ದೆ: ಕಲಬುರಗಿ ಮಹಿಳೆಗೆ ಪಿಎಂ ಮೋದಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 10:19 IST
Last Updated 31 ಮೇ 2022, 10:19 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಕಲಬುರಗಿ: ಆಯಷ್ಮಾನ್ ಭಾರತ ಯೋಜನೆಯಿಂದ ತಮ್ಮ ತಾಯಿ ಸೇರಿದಂತೆ ಊರಿನ ಹಲವರಿಗೆ ವೈದ್ಯಕೀಯ ಸೌಲಭ್ಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ ಜಿಲ್ಲೆಯ ಮಹಿಳೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಕರ್ನಾಟಕದಲ್ಲಿದ್ದರೆ‌ ನಿಮ್ಮ ಮನೆಗೆ ಬರುತ್ತಿದ್ದೆ ಎಂದು ಹೇಳಿದರು.

ಪ್ರಧಾನಿ ಅವರು ವರ್ಚುವಲ್ ವೇದಿಕೆ ಮೂಲಕ ಆಯೋಜಿಸಿದ್ದ ಗರೀಬ್ ಕಲ್ಯಾಣ್ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಸಂತೋಷಿ ಅವರೊಂದಿಗೆ ಸಂವಾದ ನಡೆಸಿದರು.

ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಸಂತೋಷಿ ಅನಾರೋಗ್ಯ ಪೀಡಿತರಾದ ತಮ್ಮ ತಾಯಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಹಾಗೂ ಜನ ಔಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧ ದೊರೆತ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಂತೋಷಿ ಕನ್ನಡದಲ್ಲಿ ಮಾತನಾಡಿದರು. ಅಧಿಕಾರಿಯೊಬ್ಬರು ಅದನ್ನು ಹಿಂದಿಗೆ ಅನುವಾದಿಸಿದರು.

ADVERTISEMENT

ಪ್ರಧಾನಿ ಮೋದಿಯವರು ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿದರೂ ನಿಮ್ಮ ಮುಖದ ಭಾವನೆ ಸಂತಸದಲ್ಲಿರುವುದು ತೋರಿಸುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬಂದು ಸಂತೋಷದಲ್ಲಿ ಭಾಗಿಯಾಗುತ್ತಿದ್ದೆ ಎಂದರಲ್ಲದೇ, ನೀವು ಆ ಊರಿನ ದೊಡ್ಡ ನಾಯಕಿಯಾಗುತ್ತೀರಾ ಎಂದು ಪ್ರಶ್ನಿಸಿದರು.

ಕಲಬುರಗಿಯ ಕಿಣ್ಣಿ ಸಡಕ್ ಗ್ರಾಮದ ಸಂತೋಷಿ
ಕಲಬುರಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‌ಸಂವಾದದಲ್ಲಿ ಭಾಗವಹಿಸಿದ್ದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.