ಕಲಬುರಗಿ: ಬಿಸಿ ನೀರು ತುಂಬಿದ್ದ ಬಕೆಟ್‌ನಲ್ಲಿ ಆಕಸ್ಮಿಕವಾಗಿ ಬಿದ್ದ ಐದು ವರ್ಷದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾಳೆ.
ತಾಜ್ ನಗರದ ಮಹಮದ್ ಗೌಸ್ ಮತ್ತು ತಾಹೇರ ಬಾನು ದಂಪತಿ ಪುತ್ರಿ ಆಫ್ರೀನ್ ಬಾನು (5) ಮೃತ ಬಾಲಕಿ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 12ರ ಸಂಜೆ ಸ್ನಾನ ಮಾಡಲು ತಾಹೇರ ಅವರು ಬಕೆಟ್‌ನಲ್ಲಿ ನೀರು ಹಾಕಿ ವಾಟರ್ ಹೀಟರ್ ಹಚ್ಚಿ ಬಿಸಿ ಮಾಡಿದ್ದರು. ನೀರು ಬಿಸಿಯಾದ ಬಳಕ ವಾಟರ್ ಹೀಟರ್ ಬಂದ್ ಮಾಡಿದ್ದರು. ಮೂವರೂ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದರು. ಒಳಗೆ ಹೋಗಿ ಬಟ್ಟೆ ತರುವ ವೇಳೆಗೆ ಆಫ್ರೀನಾ ಬಾನು ಬಿಸಿ ನೀರಿನ ಬಕೆಟ್‌ನಲ್ಲಿ ಬಿದ್ದಳು. ದೇಹದಲ್ಲಿ ಭಾಗಶಃ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಣಮುಖವಾಗಿದೆ ಎಂದು ಪೋಷಕರು ಮಗಳನ್ನು ನ.17ರಂದು ಮನೆಗೆ ಕರೆದೊಯ್ದಿದ್ದರು. ಮರುದಿನವೇ ಪದೇ ಪದೇ ವಾಂತಿ– ಭೇದಿ ಮಾಡಿಕೊಂಡಳು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದರು.
ಬೈಕ್ ಸವಾರ ಸಾವು: ಹುಮನಾಬಾದ್ ರಸ್ತೆಯ ಸಿಟಿ ಹೈವೇ ದಾಬಾ ಸಮೀಪದಲ್ಲಿ ಬಸ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಶರಣುಕುಮಾರ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ ಚಾಲಕ ಮರಿಗೌಡ ವಿರುದ್ಧ ಸಂಚಾರ ಪೊಲೀಸ್ ಠಾಣೆ– 2ರಲ್ಲಿ ಪ್ರಕರಣ ದಾಖಲಾಗಿದೆ. ಬೀದರ್‌ನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಶರಣಕುಮಾರ, ಬೈಕ್‌ನಿಂದ ಕೆಳಗೆ ಬಿದ್ದರು. ಮುಖ, ಕುತ್ತಿಗೆ, ಹೊಟ್ಟೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.