ADVERTISEMENT

ಬಾಲಕಿಯರಿಬ್ಬರು ನೀರುಪಾಲು

ಬಟ್ಟೆ ತೊಳೆಯಲು ಹೋಗಿದ್ದ ವೇಳೆ ನಡೆದ ಅವಘಡ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 5:05 IST
Last Updated 11 ಅಕ್ಟೋಬರ್ 2024, 5:05 IST
ಭೂಮಿಕಾ ದೊಡ್ಡಮನಿ.
ಭೂಮಿಕಾ ದೊಡ್ಡಮನಿ.   

ಅಫಜಲಪುರ: ತಾಲೂಕಿನ ಬನ್ನಹಟ್ಟಿ ಗ್ರಾಮದ ಇಬ್ಬರು ಬಾಲಕಿಯರು ಗುರುವಾರ ಭೀಮ ನದಿಗೆ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ನದಿ ಪಾಲಾಗಿದ್ದಾರೆ.

ಬಟ್ಟೆ ತೊಳೆಯಲು ಭೀಮಾ ನದಿಗೆ ಹೋಗಿದ್ದ ಭೂಮಿಕಾ ದೊಡ್ಡಮನಿ (8) ಮತ್ತು ಶ್ರಾವಣಿ ನಾಟಿಕಾರ (11) ನೀರು ಪಾಲಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿದ್ದು, ಶ್ರಾವಣಿಯ ಮೃತದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ. ಭೂಮಿಕಾಳಿಗಾಗಿ ಶೋಧ ಮುಂದುವರಿದಿದೆ. ಬಟ್ಟೆ ಒಗೆಯಲು ತೆರಳಿದ್ದ ಬಾಲಕಿಯರಿಬ್ಬರು ನದಿಯಲ್ಲಿ ಈಜಾಡಲು ಮುಂದಾಗಿದ್ದರು. ಈ ವೇಳೆ ಭೂಮಿಕಾ ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಅವಳನ್ನು ಶ್ರಾವಣಿ ರಕ್ಷಿಸಲು ಮುಂದಾಗಿದ್ದಾಳೆ ಎನ್ನಲಾಗಿದೆ. ಆದರೆ ನೀರಿನ
ಸೆಳೆತಕ್ಕೆ ಸಿಲುಕಿದ ಭೂಮಿಕಾ
ಮತ್ತು ಶ್ರಾವಣಿ ಇಬ್ಬರು ನೀರುಪಾಲಾಗಿದ್ದಾರೆ.

ADVERTISEMENT

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರಾವಣಿನಾಟಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.