ADVERTISEMENT

ಸಿಂಧನೂರು: ವಾಲ್ಮೀಕಿ ಭವನದ ಮೇಲೆ ಕಟ್ಟಡ ನಿರ್ಮಿಸಿ ನಮಾಜ್!

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 16:07 IST
Last Updated 9 ನವೆಂಬರ್ 2024, 16:07 IST
ಸಿಂಧನೂರು ತಾಲ್ಲೂಕಿನ ಗೋನವಾರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನದ ಮೇಲ್ಭಾಗದಲ್ಲಿ ಅಬ್ಬಾಸ್ ಅಲಿ ದರ್ಗಾದ ಗಫೂರ್‌ಸಾಬ್ ಕೊಠಡಿ ನಿರ್ಮಿಸಿರುವುದು
ಸಿಂಧನೂರು ತಾಲ್ಲೂಕಿನ ಗೋನವಾರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನದ ಮೇಲ್ಭಾಗದಲ್ಲಿ ಅಬ್ಬಾಸ್ ಅಲಿ ದರ್ಗಾದ ಗಫೂರ್‌ಸಾಬ್ ಕೊಠಡಿ ನಿರ್ಮಿಸಿರುವುದು   

ಸಿಂಧನೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಗೋನವಾರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನದ ಮೇಲ್ಭಾಗದಲ್ಲಿ ಅಬ್ಬಾಸ್ ಅಲಿ ದರ್ಗಾದ ಗಫೂರ್‌ಸಾಬ್ ಎಂಬ ವ್ಯಕ್ತಿ ಕೋಣೆಯೊಂದು ನಿರ್ಮಿಸಿ ಅದರಲ್ಲಿ ನಮಾಜ್ ಮಾಡಿದ ಘಟನೆಯಿಂದ ಗೊಂದಲ ಸೃಷ್ಟಿಯಾಗಿದೆ.

ಮೇಲ್ಭಾಗದ ಕಟ್ಟಡದಲ್ಲಿ ಮಸೀದಿಯ ಸ್ವರೂಪದ ಕಟ್ಟಡ ನಿರ್ಮಿಸಿ ನಮಾಜ್ ಮಾಡುತ್ತಿರುವುದರಿಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಉರುಕುಂದಪ್ಪ ಮತ್ತು ಸಂಗಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಬಂದೋಬಸ್ತ್‌ಗಾಗಿ ಜಿಲ್ಲಾ ಮೀಸಲು ಪಡೆ ಬೀಡುಬಿಟ್ಟಿದೆ.

ವಿವರ: ವಾಲ್ಮೀಕಿ ಭವನವನ್ನು 2014-15ರಲ್ಲಿ ನಿರ್ಮಿಸಲಾಗಿದ್ದು, ಈ ಕಟ್ಟಡವನ್ನು ದರ್ಗಾಕ್ಕೆ ಬರುವ ಭಕ್ತರು ಬಳಸುತ್ತಿದ್ದರು. ಆದರೆ, ವಾಲ್ಮೀಕಿ ಭವನದ ಕಟ್ಟಡ ಎನ್ನುವುದು ಸಾರ್ವಜನಿಕರಿಗೆ ಗೊತ್ತಿರಲಿಲ್ಲ. 2017ರಲ್ಲಿ ಮೇಲ್ಭಾಗದಲ್ಲಿ ಕೋಣೆ ನಿರ್ಮಿಸಿ ನಮಾಜ್ ಮಾಡತೊಡಗಿದ್ದರಿಂದ ಅನುಮಾನ ಬಂದು ಗ್ರಾಮದ ಉರಕುಂದಪ್ಪ ಅವರು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ ನಂತರ ಗ್ರಾಮದ ವಾರ್ಡ್‌ ನಂ.2ರಲ್ಲಿ ತಾಲ್ಲೂಕು ಪಂಚಾಯಿತಿಯ 13ನೇ ಹಣಕಾಸು ಯೋಜನೆಯಡಿಯಲ್ಲಿ ₹ 4.98 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ವಾಲ್ಮೀಕಿ ನಾಯಕ ಸಮುದಾಯ ಭವನದ ಕಟ್ಟಡ ಎಂದು ಗೊತ್ತಾಗಿದೆ.

ADVERTISEMENT

ವಾಲ್ಮೀಕಿ ಭವನದ ಮೇಲ್ಭಾಗದಲ್ಲಿ ನಿರ್ಮಿಸಿದ ಕಟ್ಟಡ ತೆರವುಗೊಳಿಸುವಂತೆ ಉರಕುಂದಪ್ಪ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಗಫೂರಸಾಬ್ ಅವರಿಗೆ ನೋಟಿಸ್ ನೀಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.